ತುಮಕೂರು ನಾಗೇಶ್ ಕೊಲೆ ಪ್ರಕರಣ: ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಪ್ಪನನ್ನು ಮಗನೇ ಗತಿ ಕಾಣಿಸಿದನೇ?

Updated on: May 14, 2025 | 7:57 PM

ಕೊಲೆಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ಮಾಡಿದಾಗ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ನಾಗೇಶ್ ತನ್ನ ಸ್ವಂತ ಮಗಳಿಗೆ ಅಂದರೆ ಸೂರ್ಯನ ಸಹೋದರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ, ಇದನ್ನು ಸಹಿಸಲಾಗದೆ ಸೂರ್ಯ ಅಪ್ಪನನ್ನೇ ಮುಗಿಸಿದ ಅಂತ ಹೇಳಲಾಗುತ್ತಿದೆ. ಕೊಲೆಗೆ ಆಸ್ತಿ ವಿವಾದವೂ ಕಾರಣವಾಗಿರಬಹುದೆನ್ನುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ತುಮಕೂರು, ಮೇ 14: ತುಮಕೂರಿನ ಐಸ್ ಕ್ರೀಂ ಫ್ಯಾಕ್ಟರಿ ಮಾಲೀಕ (ice cream factory owner) ನಾಗೇಶ್ ಕೊಲೆ ಪ್ರಕರಣವನ್ನು ಕುಣಿಗಲ್ ಪೊಲೀಸರು ಕ್ರ್ಯಾಕ್ ಮಾಡಿರುವಂತಿದೆ. ನಾವು ಈಗಾಗಲೇ ವರದಿ ಮಾಡಿರುವಂತೆ ಮೇ 11ರಂದದು ನಾಗೇಶ್ ತಮ್ಮ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಲಭ್ಯವಿದ್ದ ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ಮೇ 10ರಂದು ರಾತ್ರಿ ಇಬ್ಬರು ಯುವಕರು ಫ್ಯಾಕ್ಟರಿಯಲ್ಲೇ ನಾಗೇಶ್ ಮೇಲೆ ಹಲ್ಲೆ ಮಾಡೋದು ನಂತರ ಬಟ್ಟೆಯೊಂದನ್ನು ಅವರ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸುವ ದೃಶ್ಯ ಸೆರೆಯಾಗಿದೆ. ಪೊಲೀಸರು ಫುಟೇಜನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಬ್ಬರು ಯುವಕರಲ್ಲಿ ಒಬ್ಬ ಮೃತ ನಾಗೇಶ್ ಅವರ ಮಗ ಸೂರ್ಯ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ:  ಒಂದೇ ರಾತ್ರಿ ಎರಡು ಕೊಲೆ, 1 ಅನುಮಾನಸ್ಪದ ಶವ ಪತ್ತೆ: 3 ಮೃತದೇಹ ಕಂಡು ಬೆಚ್ಚಿಬಿದ್ದ ಚಿಂತಾಮಣೆ ಜನ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ