ಕುರಿ ಪ್ರತಾಪ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ದೇವರಾಜ್

Updated on: Feb 27, 2025 | 8:58 AM

ಮಜಾ ಟಾಕೀಸ್​ನಲ್ಲಿ ದೇವರಾಜ್ ಅವರ ಕುಟುಂಬ ಆಗಮಿಸಿದೆ. ಡೈನಾಮಿಕ್ ಫ್ಯಾಮಿಲಿ ಎಂದಾಗ ಒಂದಷ್ಟು ಮನರಂಜನೆ ಅಂತೂ ಬೇಕೆ ಬೇಕು. ಇದಕ್ಕೆ ಸರಿಯಾದ ರೀತಿಯಲ್ಲಿ ಸ್ಕ್ರಿಪ್ಟ್ ಮಾಡುವ ಕೆಲಸವನ್ನು ಸೃಜನ್ ಲೋಕೇಶ್ ಮಾಡಿದ್ದಾರೆ. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ. ಇದರಲ್ಲಿ ಡಬಲ್ ಮೀನಿಂಗ್ ಕೂಡ ಸೇರಿದೆ.

ಮಜಾ ಟಾಕೀಸ್​​ನಲ್ಲಿ ಈ ಬಾರಿ ಡೈನಾಮಿಕ್ ಫ್ಯಾಮಿಲಿಯ ಆಗಮನ ಆಗಿದೆ. ಈ ವೇಳೆ ಕುರಿ ಪ್ರತಾಪ್ ಅವರು ಎಂದಿನಂತೆ ತಮ್ಮ ಹಾಸ್ಯದ ಹೊಳೆ ಹರಿಸಿದ್ದಾರೆ. ಇದರಿಂದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದರಲ್ಲೂ ವಿಲನ್ ಪಾತ್ರ ಮಾಡುವಾಗ ಸದಾ ಗಂಭೀರವಾಗಿಯೇ ಇರೋ ದೇವರಾಜ್ ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More