ರಜನೀಕಾಂತ್ಗೆ ‘ಪೋಡಾ’ ಎಂದಿದ್ದ ಖುಷ್ಬು: ಟಿವಿ9 ಸಂವಾದದಲ್ಲಿ ಹಳೆಯ ನೆನಪು
Kushboo: ಟಿವಿ9 ನೆಟ್ವರ್ಕ್ ಆಯೋಜಿಸಿರುವ ಭಾರತದ ಅತಿದೊಡ್ಡ ಸಂವಾದ ವೇದಿಕೆ ‘ವಾಟ್ ಇಂಡಿಯಾ ಥಿಂಕ್ ಟುಡೆ’ಯಲ್ಲಿ ಭಾಗಿಯಾಗಿದ್ದ ಖುಷ್ಬು, ರಜನೀಕಾಂತ್ ಅವರಿಗೆ ‘ಪೋಡಾ’ ಎಂದು ಇಡೀ ಸೆಟ್ಗೆ ಆಘಾತ ಉಂಟುಮಾಡಿದ್ದ ಘಟನೆ ನೆನಪು ಮಾಡಿಕೊಂಡಿದ್ದಾರೆ.
ಟಿವಿ9 ನೆಟ್ವರ್ಕ್ ಆಯೋಜಿಸಿರುವ ಭಾರತದ ಅತಿದೊಡ್ಡ ಸಂವಾದ ವೇದಿಕೆ ‘ವಾಟ್ ಇಂಡಿಯಾ ಥಿಂಕ್ ಟುಡೆ’ಯಲ್ಲಿ ನಟಿ, ಮಹಿಳಾ ಆಯೋಗದ ಅಧ್ಯಕ್ಷೆ ಟಬು ಭಾಗಿಯಾಗಿ, ‘ಮಹಿಳೆ: ಹೊಸ ‘ನಾಯಕ’ ವಿಷಯದ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮುಂಬೈನಿಂದ ದಕ್ಷಿಣಕ್ಕೆ ಬಂದು ಅದರಲ್ಲಿಯೂ ತಮಿಳು ಚಿತ್ರರಂಗದಲ್ಲಿ ನೆಲೆ ನಿಂತ ಬಗೆಯನ್ನು ನಟಿ ಖುಷ್ಬು ವಿವರಿಸಿದರು. ಈ ವೇಳೆ ಹಳೆಯ ನೆನಪುಗಳಿಗೆ ಜಾರಿದರು. ಇಂದು ತಮಿಳು ನಾರಿಯೇ ಆಗಿಬಿಟ್ಟಿರುವ ಖುಷ್ಬುಗೆ ಆರಂಭದಲ್ಲಿ ತಮಿಳಿನ ಒಂದಕ್ಷರವೂ ಬರುತ್ತಿರಲಿಲ್ಲವಂತೆ. ತಮ್ಮ ಮೊದಲ ತಮಿಳು ಸಿನಿಮಾದಲ್ಲಿಯೇ ರಜನೀಕಾಂತ್, ಪ್ರಭು, ಸುಹಾಸಿನಿ ಅವರ ಜೊತೆಗೆ ನಟಿಸಿದ್ದ ಖುಷ್ಬು, ಅದಾಗಲೇ ಸ್ಟಾರ್ ಆಗಿಬಿಟ್ಟಿದ್ದ ರಜನೀಕಾಂತ್ ಅವರನ್ನು ‘ಪೋಡಾ’ ಎಂದಿದ್ದರಂತೆ. ಖುಷ್ಬು ಮಾತು ಕೇಳಿ ಇಡೀ ಸೆಟ್ಗೆ ಆಘಾತವಾಗಿತ್ತಂತೆ. ಆದರೆ ರಜನೀಕಾಂತ್ ಮಾತ್ರ ಜೋರು ನಗಲು ಆರಂಭಿಸಿದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
