ಬೌದ್ಧ ಧರ್ಮ ಅನುಸರಿಸುವ ಎಲ್ಲ ದಕ್ಷಿಣ ಏಷ್ಯಾ ದೇಶಗಳಿಗೆ ಸಂಪರ್ಕ ಕಲ್ಪಿಸುವ ಕುಶಿನಗರ ವಿಮಾನ ನಿಲ್ದಾಣ ಲೋಕಾರ್ಪಣೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2021 | 7:10 PM

ಬೌದ್ಧ ಧರ್ಮವನ್ನು ಅಸುಸರಿಸುತ್ತಿರುವ ಮುಂಗೋಲಿಯ, ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯ, ಥೈಲ್ಯಾಂಡ್, ಭೂತಾನ್, ಕೊರಿಯ ಗಣರಾಜ್ಯ, ನೇಪಾಳ ಮತ್ತು ಜಪಾನ್ ದೇಶಗಳ ಡಿಪ್ಲೊಮ್ಯಾಟ್​​​​ಗಳು  ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಉತ್ತರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದ್ದು ರಾಜಕೀಯ ಪಕ್ಷಗಳು ಗೇಮ್ ಪ್ಲ್ಯಾನ್​ಗಳನ್ನು ಹೆಣೆಯುತ್ತಿವೆ. ಅಧಿಕಾರರೂಢ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಜನಕ್ಕೆ ಪ್ರಚುರಪಡಿಸುತ್ತಿದೆ. ಅದರ ಭಾಗವಾಗಿಯೇ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ರಾಜ್ಯದ ಕುಶಿನಗರನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ಈ ವಿಮಾನ ದಕ್ಷಿಣ ಏಷ್ಯಾದ ಎಲ್ಲ ಬೌದ್ಧ ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿಮಗೆ ಗೊತ್ತಿರುವ ಹಾಗೆ, ಕುಶಿನಗರ ಒಂದು ಬಹು ಮುಖ್ಯ ಬೌದ್ಧ ಪುಣ್ಯಸ್ಥಳವಾಗಿದ್ದು, ಗೌತಮ ಬುದ್ಧರು ತಮ್ಮ ಅಂತಿಮ ದಿನಗಳನ್ನು ಇಲ್ಲೇ ಕಳೆದರು ಎಂದು ನಂಬಲಾಗಿದೆ. ಅದಲ್ಲದೆ, ಕುಶಿನಗರ ಬೌದ್ಧ ಪ್ರವಾಸಿ ಸರ್ಕೀಟ್ನ ಕೇಂದ್ರವಾಗಿದ್ದು ಇದು ನೇಪಾಳದ ಲುಂಬಿನಿ, ಸಾರಾನಾಥ ಮತ್ತು ಬೋಧಗಯಾವನ್ನು ಒಳಗೊಂಡಿದೆ. ಕುಶಿನಗರಕ್ಕೆ ಹತ್ತಿರವಿರುವ ಇತರ ಬೌದ್ಧ ಪುಣ್ಯ ಸ್ಥಳಗಳೆಂದರೆ, ನಳಂದ, ಸ್ರಾವಸ್ತಿ ಮತ್ತು ಕಪಿಲಾವಸ್ತು.
ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊಟ್ಟ ಮೊದಲ ವಿಮಾನ ಆಗಮಿಸಿದ್ದು ಶ್ರೀಲಂಕಾ ಏರ್ಲೈನ್ಸ್ನ ಒಂದು ಫ್ಳೈಟ್. ಸದರಿ ವಿಮಾನವು ಹಲವಾರು ಬೌದ್ಧ ಭಿಕ್ಕುಗಳನ್ನೊಳಗೊಂಡ ಒಂದು ತಂಡ, ಕ್ರೀಡಾ ಸಚಿವರು ಮತ್ತು ಶ್ರೀಲಂಕಾದ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ಸೋದರ ಮತ್ತು ಪ್ರಧಾನ ಮಂತ್ರಿಯಾಗಿರುವ ಮಹಿಂದ ರಾಜಪಕ್ಸ್ ಅವರ ಪುತ್ರ ನಮಲ್ ರಾಜಪಕ್ಸಾ ಹಾಗೂ ಇತರ ಗಣ್ಯರನ್ನು ಹೊತ್ತು ತಂದಿತು. ಈ ನಿಯೋಗವು, ಕುಶಿನಗರನಲ್ಲಿರುವ ಮಹಾಪರಿನಿರ್ವಾಣ ಮಂದಿರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ಬೌದ್ಧ ಧರ್ಮವನ್ನು ಅಸುಸರಿಸುತ್ತಿರುವ ಮುಂಗೋಲಿಯ, ಮ್ಯಾನ್ಮಾರ್, ವಿಯೆಟ್ನಾಂ, ಕಾಂಬೋಡಿಯ, ಥೈಲ್ಯಾಂಡ್, ಭೂತಾನ್, ಕೊರಿಯ ಗಣರಾಜ್ಯ, ನೇಪಾಳ ಮತ್ತು ಜಪಾನ್ ದೇಶಗಳ ಡಿಪ್ಲೊಮ್ಯಾಟ್​​​​ಗಳು  ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಓಕೆ, ವಿಮಾನ ನಿಲ್ದಾಣದ ಬಗ್ಗೆ ಮಾತಾಡುವುದಾದರೆ, ಇದನ್ನು 590 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು 3.2 ಕಿಮೀ ಉದ್ದದ ರನ್ ವೇ ಹೊಂದಿದೆ. ಎಂಟು ಅಂತಸ್ತುಗಳ ಏರ್ ಟ್ರಾಫಿಕ್ ನಿಯಂತ್ರಣ (ಎಟಿಸಿ) ಕೇಂದ್ರವನ್ನು 17.5 ಕಿಮೀ ಜಾಗದಲ್ಲಿ ನಿರ್ಮಿಸಲಾಗಿದೆ.

ಅಂದಹಾಗೆ, ವಿಮಾನ ನಿಲ್ದಾಣದ ನಿರ್ಮಾಣವನ್ನು ಸುಮಾರು ರೂ. 260 ಕೋಟಿ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ.

ಇದನ್ನೂ ಓದಿ:  ಕಾನ್‌ಸ್ಟೇಬಲ್ ಪರೀಕ್ಷೆ ಸಿದ್ಧತೆಗೆ ತಡರಾತ್ರಿವರೆಗೆ ಓದುತ್ತಾ ಲೈಬ್ರರಿಯಲೇ ನಿದ್ದೆ ಮಾಡಿದ ಅಭ್ಯರ್ಥಿಗಳು, ವಿಡಿಯೋ ವೈರಲ್