ಮೈಸೂರು ಗ್ರಾಮವೊಂದರ ಕಬ್ಬಿನಗದ್ದೆಯಲ್ಲಿ ಸಿಕ್ಕ ನವಜಾತ ಚಿರತೆಮರಿಗಳ ರಕ್ಷಣೆ, ತಾಯಿ ಚಿರತೆ ಸೆರೆಹಿಡಿಯಲು ಬೋನು ಇರಿಸಿದ ಅರಣ್ಯ ಸಿಬ್ಬಂದಿ

|

Updated on: Aug 11, 2023 | 11:20 AM

ಮರಿಗಳನ್ನು ಅರಸಿಕೊಂಡು ಅದು ನಿಶ್ಚಿತವಾಗಿ ಪುನಃ ಕಬ್ಬಿನಗದ್ದೆ ಕಡೆ ಬರುತ್ತದೆ ಮತ್ತು ಅವು ಕಾಣದಾದಾಗ ವ್ಯಗ್ರಗೊಳ್ಳುವ ಸಾಧ್ಯೆತೆಯನ್ನು ಅಲ್ಲಗಳೆಯಲಾಗದು. ಲಭ್ಯವಿರುವ ಮಾಹಿತಿ ಪ್ರಕಾರ ಅರಣ್ಯಾಧಿಕಾರಿಗಳು ಗುಡ್ಡದಕೊಪ್ಪಲಲ್ಲಿ ಬೋನು ತಂದಿರಿಸಿದ್ದಾರೆ.

ಮೈಸೂರು: ಮುದ್ದು ಮುದ್ದಾಗಿರುವ ಚಿರತೆ ಮರಿಗಳು (leopard cubs) ಅಮ್ಮನಿಂದ ಬೇರ್ಪಟ್ಟಿವೆ. ಪ್ರಾಯಶಃ ಒಂದೆರಡು ದಿನಗಳ ಹಿಂದೆ ಇವು ಹುಟ್ಟಿರುವಂತಿದೆ. ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಗುಡ್ಡದಕೊಪ್ಪಲು ಗ್ರಾಮದ ಕಬ್ಬು ಬೆಳೆಗಾರ (sugarcane grower) ದೊರೆಸ್ವಾಮಿಯ ಕಬ್ಬಿನ ಗದ್ದೆಯಲ್ಲಿ ಮರಿಗಳು ಪತ್ತೆಯಯಾಗಿವೆ. ಬೆಳೆದು ನಿಂತ ಕಬ್ಬಿನ ಗದ್ದೆಯಲ್ಲಿ (sugarcane paddy) ಈ ಎರಡು ಮರಿಗಳನ್ನು ಹೆತ್ತು ಪ್ರಾಯಶಃ ಅಹಾರ ಅರಸಿಕೊಂಡು ಕಾಡಿಗೆ ವಾಪಸ್ಸು ಹೋಗಿರಬಹುದು. ಕಬ್ಬು ಕಟಾವಿನ ವೇಳೆ ಮರಿಗಳು ಸಿಕ್ಕವು ಅಂತ ಹೇಳುವ ಕೂಲಿ ಕಾರ್ಮಿಕರು ಮರಿಗಳನ್ನು ಎತ್ತ್ತಿಕೊಂಡು ಬಂದು ಬೋನಲ್ಲಿ ಇರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ರವಾನಿಸಿ, ತಾಯಿ ಚಿರತೆಯನ್ನು ಸೆರೆ ಹಿಡಿಯುವ ವ್ಯವಸ್ಥೆ ಮಾಡಬೇಕೆಂದು ಮನವಿ ಕೂಡ ಮಾಡಿದ್ದಾರೆ. ಮರಿಗಳನ್ನು ಅರಸಿಕೊಂಡು ಅದು ನಿಶ್ಚಿತವಾಗಿ ಪುನಃ ಕಬ್ಬಿನಗದ್ದೆ ಕಡೆ ಬರುತ್ತದೆ ಮತ್ತು ಅವು ಕಾಣದಾದಾಗ ವ್ಯಗ್ರಗೊಳ್ಳುವ ಸಾಧ್ಯೆತೆಯನ್ನು ಅಲ್ಲಗಳೆಯಲಾಗದು. ಲಭ್ಯವಿರುವ ಮಾಹಿತಿ ಪ್ರಕಾರ ಅರಣ್ಯಾಧಿಕಾರಿಗಳು ಗುಡ್ಡದಕೊಪ್ಪಲಲ್ಲಿ ಬೋನು ತಂದಿರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ