ಇತ್ತ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅತ್ತೂರು ಗ್ರಾಮದಲ್ಲಿ ಅಳಿವಿನಂಚಿನ ಚಿಪ್ಪು ಹಂದಿಯ ಚಿಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ ಮಾಡಿದ ಘಟನೆ ನಡೆದಿದೆ. ಸಿಐಡಿ ಅರಣ್ಯ ಘಟಕದಿಂದ ರಾಜು (40), ಧರ್ಮ (35) ಬಂಧಿಸಲಾಗಿದೆ.
ಕುರಿ ಕಳ್ಳತನಕ್ಕೆ ಬಂದು ಕುರಿಗಾಹಿ ಹತ್ಯೆಗೈದ ಖದೀಮರು
ಕುರಿ ಕಳ್ಳತನಕ್ಕೆ ಬಂದ ಖದೀಮರು ಕುರಿಗಾಹಿ ಹತ್ಯೆಗೈದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗಂಗಾಪುರ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ವೆಂಕಟೇಶ್ ಮುತ್ತೂರು (50) ಕೊಲೆ ಮಾಡಲಾಗಿದೆ. ವೆಂಕಟೇಶ್ ಹತ್ಯೆಗೈದು 40 ಕುರಿಯನ್ನು ಹಂತಕರು ಹೊತ್ತೊಯ್ದಿದ್ದಾರೆ. ಕಂಬಕ್ಕೆ ಕಟ್ಟಿಹಾಕಿ ವೆಂಕಟೇಶ್‌ಗೆ ಕಳ್ಳರು ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡು ವೆಂಕಟೇಶ್ ಮೃತಪಟ್ಟಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಯಚೂರು: ಕೆಲಸ ಕಳೆದುಕೊಂಡು ಮನನೊಂದಿದ್ದ ವ್ಯಕ್ತಿ ಆತ್ಮಹತ್ಯೆ
ಇತ್ತ ರಾಯಚೂರಿನಲ್ಲಿ ಕೆಲಸ ಕಳೆದುಕೊಂಡು ಮನನೊಂದಿದ್ದ ರವಿತೇಜ (25) ಎಂಬಾತ ನೇಣಿಗೆ ಶರಣಾದ ದುರ್ಘಟನೆ ಸಂಭವಿಸಿದೆ. ರವಿತೇಜ, ಮಸ್ಕಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ: ಬಸ್, ಕಾರು ಡಿಕ್ಕಿ; ಇಬ್ಬರು ದುರ್ಮರಣ
ಸರ್ಕಾರಿ ಬಸ್, ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರುಗುಪ್ಪಿ ಬಳಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಂಪಿ ಪ್ರವಾಸಕ್ಕೆ ಕಾರಿನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಹಲವರಿಗೆ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರೀಶಿಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಚಿರತೆಯೊಂದಿಗೆ ಕಾದಾಡಿ ಗೆದ್ದ ಸಾಕು ನಾಯಿ; ವಿಡಿಯೋ ನೋಡಿ
ಇದನ್ನೂ ಓದಿ: Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು