ರಾಜ್ಯದಲ್ಲಿ ಮಳೆ ಕೊರತೆ, ಮೋಡ ಬಿತ್ತನೆ ಮೊರೆ ಹೋದ ಕಾಂಗ್ರೆಸ್ MLA; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 9:32 PM

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ‘ಕೈ’ ಶಾಸಕ. ಪ್ರಕಾಶ್ ಕೋಳಿವಾಡ ಒಡೆತನದ ಪಿಕೆಕೆ ಸಂಸ್ಥೆಯಿಂದ ಮೋಡ ಬಿತ್ತನೆ ಮಾಡಲಾಗುತ್ತಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡುತ್ತಿದ್ದು, ಇಂದು ಪ್ರಾಯೋಗಿಕವಾಗಿ ಹುಬ್ಬಳ್ಳಿ ಏರ್​​ಪೋರ್ಟ್​ನಿಂದ ಮೋಡ ಬಿತ್ತನೆ ಮಾಡಲಾಯಿತು.

ಹಾವೇರಿ, ಸೆ.03: ಕಾಂಗ್ರೆಸ್​​ ಶಾಸಕ ಪ್ರಕಾಶ್​​ ಕೋಳಿವಾಡ (Prakash Koliwad) ಅವರು ಮಳೆ ಬಾರದ ಹಿನ್ನಲೆ ಮೋಡ ಬಿತ್ತನೆಗೆ ಮುಂದಾಗಿದ್ದಾರೆ. ನಾಳೆ(ಸೆ.03) ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ (Cloud Seeding) ಚಾಲನೆ ನೀಡಲಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ‘ಕೈ’ ಶಾಸಕ. ಪ್ರಕಾಶ್ ಕೋಳಿವಾಡ ಒಡೆತನದ ಪಿಕೆಕೆ ಸಂಸ್ಥೆಯಿಂದ ಮೋಡ ಬಿತ್ತನೆ ಮಾಡಲಾಗುತ್ತಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡುತ್ತಿದ್ದು, ಇಂದು ಪ್ರಾಯೋಗಿಕವಾಗಿ ಹುಬ್ಬಳ್ಳಿ ಏರ್​​ಪೋರ್ಟ್​ನಿಂದ ಮೋಡ ಬಿತ್ತನೆ ಮಾಡಲಾಯಿತು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಚಾಲನೆ ನೀಡಿರುವ ಪಿಕೆಕೆ ಸಂಸ್ಥೆ. ನಾಳೆಯಿಂದ 3 ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Sep 03, 2023 09:26 PM