Gold Treasure Fraud: ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ

Edited By:

Updated on: Feb 20, 2026 | 4:41 PM

ಇತಿಹಾಸ ಪ್ರಸಿದ್ಧ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿಸಿಕ್ಕ ಬೆನ್ನಲ್ಲೇ, ದೇಶ ಹಾಗೂ ವಿದೇಶದ ಗಮನ ಸೆಳೆದಿದೆ. ಇದಕ್ಕೂ ಮೊದಲೇ ಮುಸ್ಲಿಂ ಮೌಲ್ವಿಯೋರ್ವ ನಿಧಿ ಹುಡುಕಿಕೊಡುವುದಾಗಿ ಮೋಸ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದಾನೆ. ಆ ದೃಶ್ಯ ಇದೀಗ ಬಯಲಿಗೆ ಬಂದಿದೆ. ಈ ಸಂಬಂಧ ಉತ್ತರಾಖಂಡ ರಾಜ್ಯದ ಕಾಶಿಪುರದ ಹಜರತ್ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಧಿಗಾಗಿ ಸಣ್ಣಬಸಪ್ಪ, ದೊಡ್ಡಬಸಪ್ಪ ಅವರಿಂದ ಮೌಲ್ವಿ ಲಕ್ಷಾಂತರ ಹಣ ಬೇಡಿಕೆ ಇಟ್ಟಿದ್ದ. ಆದ್ರೆ, ಹಣ ಕೊಡಲು ಒಪ್ಪದಿದ್ದಾಗ ಮೌಲ್ವಿ, ಕಾಲಿಂದ ಒದ್ದು ಎಲ್ಲವೂ ಮಣ್ಣಾಗಲಿ ಎಂದಿದ್ದ. ಸದ್ಯ ಮೌಲ್ವಿಯ ವಿಡಿಯೋ ಬಹಿರಂಗವಾಗಿದೆ.

ಗದಗ, (ಫೆಬ್ರವರಿ 20): ಇತಿಹಾಸ ಪ್ರಸಿದ್ಧ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿಸಿಕ್ಕ ಬೆನ್ನಲ್ಲೇ, ದೇಶ ಹಾಗೂ ವಿದೇಶದ ಗಮನ ಸೆಳೆದಿದೆ. ಇದಕ್ಕೂ ಮೊದಲೇ ಮುಸ್ಲಿಂ ಮೌಲ್ವಿಯೋರ್ವ ನಿಧಿ (Lakkundi Gold Treasure Fraud)ಹುಡುಕಿಕೊಡುವುದಾಗಿ ಮೋಸ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಸಣ್ಣಬಸಪ್ಪ ಜಮೀನಿನಲ್ಲಿ ಬಿಂದಿಗೆ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದಾನೆ. ಆ ದೃಶ್ಯ ಇದೀಗ ಬಯಲಿಗೆ ಬಂದಿದೆ. ಈ ಸಂಬಂಧ ಉತ್ತರಾಖಂಡ ರಾಜ್ಯದ ಕಾಶಿಪುರದ ಹಜರತ್ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಧಿಗಾಗಿ ಸಣ್ಣಬಸಪ್ಪ, ದೊಡ್ಡಬಸಪ್ಪ ಅವರಿಂದ ಮೌಲ್ವಿ ಲಕ್ಷಾಂತರ ಹಣ ಬೇಡಿಕೆ ಇಟ್ಟಿದ್ದ. ಆದ್ರೆ, ಹಣ ಕೊಡಲು ಒಪ್ಪದಿದ್ದಾಗ ಮೌಲ್ವಿ, ಕಾಲಿಂದ ಒದ್ದು ಎಲ್ಲವೂ ಮಣ್ಣಾಗಲಿ ಎಂದಿದ್ದ. ಸದ್ಯ ಮೌಲ್ವಿಯ ವಿಡಿಯೋ ಬಹಿರಂಗವಾಗಿದೆ.

ಇದನ್ನೂ ನೋಡಿ: ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್, ಬೇರೆ ರಾಜ್ಯದ ವ್ಯಕ್ತಿಗೆ ಲಕ್ಕುಂಡಿ ನಿಧಿ ಗೊತ್ತಾಗಿದ್ಹೇಗೆ?

Follow Us
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More