ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ

Edited By:

Updated on: Feb 04, 2026 | 10:33 PM

ಲಕ್ಕುಂಡಿ ಚಿನ್ನದ ಆಗರ ಇರೋ ಊರು. ಚಿನ್ನ ನಾಣ್ಯವನ್ನ ಟಂಕಿಸುತ್ತಿದ್ದ ನೆಲ. ಇದೇ ಲಕ್ಕುಂಡಿಗೆ ಚಿನ್ನ ಎಲ್ಲಿಂದ ಬರ್ತಿತ್ತು ಎಂದು ಟಿವಿ9 ತಂಡ ಹುಡುಕಲು ಹೊರಟಿದ್ದಾಗ ಸಿಕ್ಕಿದ್ದೇ ಈ ಗುಹೆ. ಹೌದು... ಗದಗ ಜಿಲ್ಲೆ ಕಪ್ಪತ್ತಗುಡ್ಡದ ಗುಹೆಯಲ್ಲಿ ಚಿನ್ನದ ನಿಕ್ಷೇಪ ಇವೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಶಿಲ್ಪಕಲೆಯ ತವರು.

ಗದಗ, (ಫೆಬ್ರವರಿ 04): ಲಕ್ಕುಂಡಿ (lakkundi) ಚಿನ್ನದ ಆಗರ ಇರೋ ಊರು. ಚಿನ್ನ ನಾಣ್ಯವನ್ನ ಟಂಕಿಸುತ್ತಿದ್ದ ನೆಲ. ಇದೇ ಲಕ್ಕುಂಡಿಗೆ ಚಿನ್ನ ಎಲ್ಲಿಂದ ಬರ್ತಿತ್ತು ಎಂದು ಟಿವಿ9 ತಂಡ ಹುಡುಕಲು ಹೊರಟಿದ್ದಾಗ ಸಿಕ್ಕಿದ್ದೇ ಈ ಗುಹೆ. ಹೌದು… ಗದಗ (Gadag) ಜಿಲ್ಲೆ ಕಪ್ಪತ್ತಗುಡ್ಡದ ಗುಹೆಯಲ್ಲಿ ಚಿನ್ನದ ನಿಕ್ಷೇಪ ಇವೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಶಿಲ್ಪಕಲೆಯ ತವರು. ಇದೇ ಲಕ್ಕುಂಡಿ ಟಂಕಸಾಲೆಯಿಂದ ಪ್ರಸಿದ್ಧವಾಗಿತ್ತು. ಟಂಕಸಾಲೆಯಲ್ಲಿ ಚಿನ್ನದ ನಾಣ್ಯಗಳನ್ನು ರೆಡಿ ಮಾಡಲಾಗುತ್ತಿತ್ತು. ಇಲ್ಲಿಯ ಟಂಕಸಾಲೆಗಳಿಗೆ ಚಿನ್ನ ಬರ್ತಿದ್ದಿದ್ದೇ ಕಪ್ಪತ್ತಗುಡ್ಡದಿಂದ. ಬಳಿಕ ಕಪ್ಪತ್ತಗುಡ್ಡದಿಂದ ತರಲಾಗುತ್ತಿದ್ದ ಚಿನ್ನವನ್ನು ಲಕ್ಕುಂಡಿಯ ಟಂಕಸಾಲೆಯಲ್ಲಿ ಶುದ್ಧೀಕರಿಸಿ, ಚಿನ್ನದ ನಾಣ್ಯಗಳನ್ನು ತಯಾರಿಸಲಾಗುತ್ತಿತ್ತು ಅಂತ ಇತಿಹಾಸ ತಜ‌್ಞರು ಅಭಿಪ್ರಾಯ ಪಟ್ಟಿದ್ದಾರೆ. ಚಾಲುಕ್ಯರ ಕಾಲದಲ್ಲಿ ಆರಂಭವಾಗಿದ್ದ ಚಿನ್ನದ ಬೇಟೆ, ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರಿದಿತ್ತು. ಬ್ರಿಟಿಷರ ಕಾಲದಲ್ಲೂ ಇಲ್ಲಿ ಚಿನ್ನ ಅಗೆಯಲಾಗಿದ್ದು, ಗದಗ ಜಿಲ್ಲೆಯ ಅತ್ತಿಕಟ್ಟಿ, ಮಾಹಾಲಿಂಗಪೂರ ಗ್ರಾಮದ ಸಮೀಪವಿರುವ ಗುಹೆಗಳು ಅದಕ್ಕೆ ಸಾಕ್ಷಿಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More