ಜಮೀನು ವಿವಾದ: ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಧಾರವಾಡದ ಹೊರವಲಯದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಉದ್ಯಮಿ ಫಿಲೋಮಿನಾ ಅವರ ಅಂಗರಕ್ಷಕರು ಯುವಕ ವಿಠ್ಠಲ್ ವಾಲೀಕಾರ್ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ವಸತಿ ನಿವೇಶನ ನಿರ್ಮಾಣದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಎಂಟು ಸುತ್ತು ಗುಂಡು ಹಾರಿಸಲಾಗಿದ್ದು, ವಿಠ್ಠಲ್ ಗಾಯಗೊಂಡಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ವಾದವಿವಾದ ನಡೆದಿತ್ತು.
ಧಾರವಾಡ, ಮೇ 26: ಜಮೀನು ವ್ಯಾಜ್ಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು, ಈ ವೇಳೆ ಹುಬ್ಬಳ್ಳಿಯ ಉದ್ಯಮಿ ಫೆಲೋಮಿನಾ ಅಂಗರಕ್ಷಕರಿಂದ ಯುವಕನ ಕಾಲಿಗೆ ಫೈರಿಂಗ್ ಮಾಡಿರುವಂತಹ ಘಟನೆ ಧಾರವಾಡ ಹೊರವಲಯದ ತ್ರಿಬಲ್ ಐಟಿ ಬಳಿ ನಡೆದಿದೆ. ಅಂಗರಕ್ಷಕರಿಂದ 8 ಸುತ್ತು ಫೈರಿಂಗ್ ಮಾಡಲಾಗಿದ್ದು, 24 ವರ್ಷದ ವಿಠ್ಠಲ್ ವಾಲೀಕಾರ್ ಕಾಲಿಗೆ ಗುಂಡು ತಗುಲಿದೆ. ಸದ್ಯ ಗಾಯಾಳು ವಿಠ್ಠಲ್ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸತಿ ನಿವೇಶನ ಮಾಡಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಮ್ಮ ಪರ ತೀರ್ಪು ಬಂದಿದೆ ಅಂತಾ ಫಿಲೋಮಿನಾ ವಾದಿಸಿದ್ದಾರೆ. ಈ ವೇಳೆ 2 ಗುಂಪುಗಳ ನಡುವೆ ಗಲಾಟೆಯಾಗಿ ಗುಂಡಿನ ದಾಳಿ ನಡೆದಿದೆ. ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us