ರಾಯಚೂರಿನ ಲಿಂಗಸುಗೂರು ಪುರಸಭೆಯಲ್ಲಿ ಲ್ಯಾಂಡ್ ಮಾಫಿಯಾ -ಸಿಗ್ನೇಚರ್ ಇಲ್ಲದೆಯೇ ವೈಟ್ನರ್ ಹಚ್ಚಿ ದಾಖಲೆ ಸೃಷ್ಟಿ!

| Updated By: ಸಾಧು ಶ್ರೀನಾಥ್​

Updated on: Aug 31, 2023 | 11:34 AM

ಸರಕಾರಿ ಇಲಾಖೆಯಲ್ಲೇ ಹಣಕ್ಕೆ ನಕಲಿ ದಾಖಲೆ ಸೃಷ್ಟಿಯಾಗುತ್ತಿದೆ. ತಮ್ಮ ಬಳಿಯಿರುವ ಅಸಲಿ ದಾಖಲೆಗಳನ್ನು ಹಿಡಿದು ತಿರುಗಾಡುವ ಮೂಲ ಮಾಲೀಕರು ಫಜೀತಿಗೀಡಾಗಿದ್ದಾರೆ. ಬಡಾವಣೆಗಳು, ಕಟ್ಟಡಗಳು ಹಾಗೂ ನಿವೇಶನಗಳ ಮೂಲ ಮಾಲೀಕರ ಹೆಸರನ್ನೇ ಭಾವಚಿತ್ರ ಸಮೇತ ನಕಲಿ ಸೃಷ್ಟಿಸಲಾಗಿದೆ. ಲಿಂಗಸ್ಗೂರು ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಹೀಗೆ ನಕಲಿ ದಾಖಲೆಗಳ ಸೃಷ್ಟಿಯಾಗುತ್ತಿದ್ದು, ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ.

ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ (Lingasugur Town Municipal Council) ಲ್ಯಾಂಡ್ ಮಾಫಿಯಾಕ್ಕೆ ಸಿಲುಕಿ ಅಸಲಿ-ನಕಲಿ ದಾಖಲೆಗೆ ನೂರಾರು ಮಾಲೀಕರು ಕಂಗಾಲಾಗಿದ್ದಾರೆ. ಡಿಜಿಟಲೀಕರಣ ಹೆಸರಲ್ಲಿ ಆಸ್ತಿಗಳನ್ನ ಅನ್ಯರ ಹೆಸರಿಗೆ ಮಾಡಿ ಮಹಾ ವಂಚನೆಯಾಗಿದೆ. ಖಾತಾ ಬದಲಾವಣೆಯಲ್ಲೇ ಅಧಿಕಾರಿಗಳಿಂದ ಮಹಾ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಮೂಲ ದಾಖಲೆ ಬದಲಿಸಿ, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಲಾಗಿದೆ. ವೈಟ್ನರ್ ಮೂಲಕ ಕಾಗದ ರೂಪದ ದಾಖಲೆಗಳಲ್ಲಿ ನಕಲು ಮಾಡುತ್ತಿರೋದು (Duplicate Land Documents) ಬೆಳಕಿಗೆ ಬಂದಿದ್ದು, ನಕಲಿ ದಾಖಲೆಯನ್ನ ಸೃಷ್ಟಿಸಿ ಕೋಟ್ಯಾಂತರ ಹಣ ವಹಿವಾಟು ನಡೆದಿದೆ (Land mafia).

ಸರಕಾರಿ ಇಲಾಖೆಯಲ್ಲೇ ಲಕ್ಷ ಲಕ್ಷ ಹಣಕ್ಕೆ ನಕಲಿ ದಾಖಲೆ ಸೃಷ್ಟಿಯಾಗುತ್ತಿರುವುದು ಸೋಜಿಗವಾಗಿದೆ. ತಮ್ಮ ಬಳಿಯಿರುವ ಅಸಲಿ ದಾಖಲೆಗಳನ್ನು ಹಿಡಿದು ತಿರುಗಾಡುವ ಮೂಲ ಮಾಲೀಕರು ಫಜೀತಿಗೀಡಾಗಿದ್ದಾರೆ. ಬಡಾವಣೆಗಳು, ಕಟ್ಟಡಗಳು ಹಾಗೂ ನಿವೇಶನಗಳ ಮೂಲ ಮಾಲೀಕರ ಹೆಸರನ್ನೇ ಭಾವಚಿತ್ರ ಸಮೇತ ನಕಲಿ ಸೃಷ್ಟಿಸಲಾಗಿದೆ. ಲಿಂಗಸ್ಗೂರು ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಹೀಗೆ ನಕಲಿ ದಾಖಲೆಗಳ ಸೃಷ್ಟಿಯಾಗುತ್ತಿದ್ದು, ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬ್ರೋಕರ್ ಗಳಿಂದಲೇ ಕುಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಒಬ್ಬರ ಆಸ್ತಿ ಮತ್ತೊಬ್ಬರಿಗೆ ಮಾಡಲು ವೈಟ್ನರ್ ಬಳಕೆ ಮಾಡಿ, ಹಣದ ಆಸೆಗೆ ವೈಟ್ನರ್ ಹಚ್ಚಿ ಮೂಲ ದಾಖಲೆಯನ್ನೇ ತಿದ್ದಿ ನಕಲು ಮಾಡುತ್ತಿದ್ದಾರೆ ಎನ್ನಲಾಗಿದೆ. ಸುಮಾರು 50 ಕ್ಕೂ ಹೆಚ್ಚು ಜನರ ಆಸ್ತಿ ಕಬಳಿಕೆಯ ಅಕ್ರಮ ಬಯಲಾಗಿದೆ. ಪುರಸಭೆ ವ್ಯಾಪ್ತಿಯ 2-1-81/3 ರ ಆಸ್ತಿ ಮತ್ತೊಬ್ಬರ ಹೆಸರಿಗೆ ನೋಂದಣಿಯಾಗಿದೆ. ಲಿಂಗಸ್ಗೂರಿನ ಗೌಳೀಪುರ ಗಲ್ಲಿಯಲ್ಲಿರುವ ಭೂಮಿಯಲ್ಲಿ ತಾಯಿ ನೀಲಮ್ಮ ಚನ್ನಪ್ಪ ಅನ್ನೋರ ಸಿಗ್ನೇಚರ್ ಇಲ್ಲದೆಯೇ ವೈಟ್ನರ್ ಹಚ್ಚಿ ದಾಖಲೆ ಸೃಷ್ಟಿಸಲಾಗಿದೆ. ಶಿವಪುತ್ರ ಅನ್ನೋರ ಹೆಸರು ಉಲ್ಲೇಖಿಸಿ ದಾಖಲೆ ಸೃಷ್ಟಿಸಿಕೊಂಡಿರುವ ಆರೋಪ ಇದಾಗಿದೆ. ನನ್ನ ತಾಯಿ ಸಿಗ್ನೇಚರ್ ಮಾಡಿಲ್ಲ. ನನಗೆ ನನ್ನ ತಾಯಿ ಆಸ್ತಿ ಬೇಕು ಎಂದು ಮಗ ವಿಜಯ್ ಅನ್ನೋರು ಈಗ ಪಟ್ಟು ಹಿಡಿದಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟಾಗ ಇನ್ನೂ ಅನೇಕ ಪ್ರಕರಣ ಬೆಳಕಿಗೆ ಬರುತ್ತಿವೆ.

35 ವರ್ಷಗಳಿಂದ ಪುರಸಭೆಗೆ ಟ್ಯಾಕ್ಸ್ ಕಟ್ತಿದ್ದ ಅಜ್ಜಿ ಅಮರಮ್ಮ ಅವರು ತಮಗೆ ವಂಚನೆಯಾಗಿದೆ ಎಂದು ಪುರಸಭೆ ಎದುರು ಧರಣಿ ಕುಳಿತಿದ್ದಾರೆ. ಹೀಗೆಯೇ ನೂರಾರು ಜನರಿಗೆ ವಂಚನೆಯಾಗಿರುವ ಮಾತುಗಳು ಕೇಳಿಬಂದಿವೆ.