ನಿರಂತರ ಮಳೆಗೆ ಸಿಎಂ ತವರು ಜಿಲ್ಲೆಯ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡಿ
ನಿರಂತರ ಮಳೆಯಿಂದ ಮೈಸೂರಿನ ಶ್ರೀರಾಂಪುರ, ದಡ್ಡಗಳ್ಳಿ ನಡುವಿನ ರಿಂಗ್ ರಸ್ತೆಯಲ್ಲಿ ಭೂಕುಸಿತವಾಗಿದೆ. ಮುಖ್ಯರಸ್ತೆಯಲ್ಲೇ ಭೂಮಿ ಕುಸಿದಿದ್ದರಿಂದ ಸಂಚಾರಕ್ಕೆ ಅಡ್ಡಿ ಆಗಿದೆ. ಹಳೆ ಕಾಲದ ಬಾವಿ ಇರಬಹುದೆಂದು ಅನುಮಾನ ವ್ಯಕ್ತಪಡಿಸಿಲಾಗಿದ್ದು, ಇನ್ನೂ 4-5 ದಿನ ವಾಹನ ಸಂಚಾರ ನಿರ್ಬಂಧ ಸಾಧ್ಯತೆ ಇದೆ.
ಮೈಸೂರು, ಜುಲೈ 20: ಕರ್ನಾಟಕದಲ್ಲಿ ಹಲವೆಡೆ ನಿರಂತರ ಧಾರಾಕಾರ ಮಳೆ (rain) ಸುರಿಯುತ್ತಿದೆ. ಹೀಗಾಗಿ ಅವಾಂತರಗಳು ಕೂಡ ಸಂಭವಿಸುತ್ತಿವೆ. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ತವರು ಜಿಲ್ಲೆಯ ಶ್ರೀರಾಂಪುರ, ದಡ್ಡಗಳ್ಳಿ ನಡುವೆ ರಿಂಗ್ ರಸ್ತೆಯಲ್ಲಿ ಭೂಕುಸಿತವಾಗಿದೆ. ಮುಖ್ಯರಸ್ತೆಯಲ್ಲೇ ಭೂಮಿ ಕುಸಿದಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹಳೆ ಕಾಲದ ಬಾವಿ ಇರಬಹುದೆಂದು ಅನುಮಾನ ವ್ಯಕ್ತಪಡಿಸಲಾಗಿದೆ. ಭಾರಿ ಗಾತ್ರದ ಹೊಂಡ ಬಿದ್ದಿದ್ದರಿಂದ ಕೂತೂಹಲದಿಂದ ಸಾರ್ವಜನಿಕರು ವೀಕ್ಷಿಸಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿದ್ದು, ಜೆಸಿಬಿ ಮೂಲಕ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಸದ್ಯ ಇನ್ನೂ 4-5 ದಿನ ವಾಹನ ಸಂಚಾರ ನಿರ್ಬಂಧ ಸಾಧ್ಯತೆ ಇದ್ದು, ಸರ್ವಿಸ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.