ಸೆಟ್​ನಲ್ಲೇ ಅಡುಗೆ ಮಾಡಿಕೊಡುತ್ತಿದ್ದರು: ಹಿರಿಯ ನಟಿ ಲೀಲಾವತಿ ಬಗ್ಗೆ ಉಮಾಶ್ರೀ ಮಾತು

Updated on: Jul 10, 2023 | 7:34 AM

Leelavathi: ಹಿರಿಯ ನಟಿ ಲೀಲಾವತಿಯವರನ್ನು ಭೇಟಿ ಆಗಿ ಯೋಗಕ್ಷೇಮ ವಿಚಾರಿಸಿದ ಉಮಾಶ್ರೀ, ಹಳೆಯ ನೆನಪುಗಳಿಗೆ ಜಾರಿದ್ದಾರೆ.

ಹಿರಿಯ ನಟಿ ಲೀಲಾವತಿ (Leelavathi)  ಪುತ್ರ ವಿನೋದ್ ರಾಜ್ (Vinod Raj) ಜೊತೆಗೆ ಗಾಂಧಿನಗರದಿಂದ ದೂರವಾಗಿ ನೆಲಮಂಗಲದ ತೋಟದ ಮನೆಯಲ್ಲಿ ಬದುಕು ಕಳೆಯುತ್ತಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿರುವ ಲೀಲಾವತಿ ಅವರನ್ನು ಚಿತ್ರರಂಗದ ಹಲವರು ಆಗಾಗ್ಗೆ ಹೋಗಿ ಭೇಟಿ ಆಗುತ್ತಿರುತ್ತಾರೆ. ಅಂತೆಯೇ ನಿನ್ನೆ (ಜುಲೈ 09) ಉಮಾಶ್ರೀ, ಪದ್ಮಾ ವಾಸಂತಿ ಹಾಗೂ ಇತರರು ನೆಲಮಂಗಲದ ಹಳ್ಳಿಗೆ ಹೋಗಿ ಲೀಲಾವತಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಬಳಿಕ ಲೀಲಾವತಿ ಅವರು ಸೆಟ್​ನಲ್ಲಿ ಅಡುಗೆ ಮಾಡುತ್ತಿದ್ದ ದಿನಗಳನ್ನು ಉಮಾಶ್ರೀ ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More