ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!
ಕರ್ನಾಟಕ ರಾಜಧಾನಿ ಬೆಂಗಳೂರಿಗೂ ಇದೀಗ ಚಿರತೆ ಕಾಟ ಶುರುವಾಗಿದೆ. ನಗರದ ಅಂಜನಾಪುರ ಐದನೇ ಬ್ಲಾಕ್ನಲ್ಲಿ ಮನೆಯೊಂದರ ಗೇಟ್ ಒಳಗೆ ಚಿರತೆ ಬಂದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟ ಇರುವ ಬಗ್ಗೆ ವರದಿಯಾಗುತ್ತಿದ್ದು, ಜನ ರಾತ್ರಿ ವೇಳೆ ಮನೆಯಿಂದ ಹೊರಹೋಗಲೂ ಹೆದರುವಂತಾಗಿದೆ.
ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನ ಅಂಜನಾಪುರದಲ್ಲಿ ಚಿರತೆ ಬಂದಿರುವ ಸಿಸಿಟಿವಿ ವಿಡಿಯೋ ಕೆಲವು ದಿನಗಳ ಹಿಂದೆ ಜನರನ್ನು ಭಯಭೀತರನ್ನಾಗಿಸಿತ್ತು. ಇದೀಗ ಮತ್ತೆ ಅಂಜನಾಪುರದ 5ಜಿ ಬ್ಲಾಕ್ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಂದೀಪ್ ಎಂಬುವರ ಮನೆ ಗೇಟ್ ಬಳಿ ಚಿರತೆ ಕಾಣಿಸಿಕೊಂಡಿದೆ. ತಡರಾತ್ರಿ ಮನೆ ಗೇಟ್ ಒಳಗೇ ಬಂದ ಚಿರತೆ ನಂತರ ಹೊರ ಹೋಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
Loading...
Unable to load recommendations.
Follow Us