ಹಾವೇರಿ: ರಸ್ತೆ ಬದಿ ಚಿರತೆ ಕಂಡು ಗಾಬರಿಯಾದ ವಾಹನ ಸವಾರರು! ಇಲ್ಲಿದೆ ವಿಡಿಯೋ

| Updated By: Rakesh Nayak Manchi

Updated on: Nov 25, 2023 | 9:46 PM

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ, ಚಳಿಗೇರಿಯ ಅರಣ್ಯ ಪ್ರದೇಶದ ರಸ್ತೆ ಬದಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಇದರ ವಿಡಿಯೋವನ್ನು ವಾಹನ ಸವಾರರೊಬ್ಬರು ಸೆರೆಹಿಡಿದಿದ್ದಾರೆ. ಸದ್ಯ ಚಿರತೆ ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಆತಂಕದಲ್ಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ಹಾವೇರಿ, ನ.25: ಜಿಲ್ಲೆಯ (Haveri) ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ, ಚಳಿಗೇರಿಯ ಬಳಿ ರಸ್ತೆ ಪಕ್ಕ ಚಿರತೆ ಪ್ರತ್ಯಕ್ಷಗೊಂಡಿದೆ (Leopard Spotted). ರಸ್ತೆಯ ಪಕ್ಕದಲ್ಲಿ ಚಿರತೆ ನಿಂತಿರುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ಚಿರತೆ ಕಾಣಿಸಿಕೊಂಡ ನಂತರ ವಾಹನ ಸವಾರರು ಭೀತಿಯಿಂದಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ