ಅನ್ನಭಾಗ್ಯ ಯೋಜನೆ ಜಾರಿಗೆ ಬಿಜೆಪಿ ನಾಯಕರು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಿ, ಇಲ್ಲಲ್ಲ! ಪ್ರಿಯಾಂಕ್ ಖರ್ಗೆ, ಸಚಿವ
ಎಫ್ ಸಿ ಐ ನಿಂದ ಪುಕ್ಸಟ್ಟೆ ಅಕ್ಕಿ ಕೊಡಿ ಅಂತ ಕರ್ನಾಟಕ ಸರ್ಕಾರವೇನೂ ಕೇಳಿಲ್ಲ, ಆದರೆ ಕೇಂದ್ರ ಮಾತ್ರ ತಾರತಮ್ಯ ನೀತಿ ಪ್ರದರ್ಶಿಸುತ್ತಿದೆ ಎಂದು ಖರ್ಗೆ ಹೇಳಿದರು.
ಬೆಂಗಳೂರು: ಅನ್ನಭಾಗ್ಯ ಯೋಜನೆ ಜನಕ್ಕೆ ಬೇಗ ತಲುಪಲಿಲ್ಲವೆಂದರೆ ಪ್ರತಿಭಟನೆ ಮಾಡುತ್ತೇವೆ ಎಂದಿರುವ ಬಿಜೆಪಿ ಶಾಸಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅವರು ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದ ಮುಂದೆ ಪ್ರದರ್ಶಿಸಲಿ ಅಂತ ಕುಟುಕಿದ್ದಾರೆ. ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಕೇಂದ್ರದ ನೆರವು ಬೇಕಾಗುತ್ತದೆ. ಅನ್ನಭಾಗ್ಯ ಸ್ಕೀಮ್ ಗಾಗಿ ನಾವು ಕೇಂದ್ರ ಆಹಾರ ನಿಗಮದಿಂದ ಅಕ್ಕಿ ಕೇಳಿದರೆ ಕೇಂದ್ರ ಸರ್ಕಾರ ಮೊದಲು ಖಾಸಗಿ ಸಂಸ್ಥೆಗಳಲ್ಲಿನ ದಾಸ್ತಾನನ್ನು ಖಾಲಿ ಮಾಡಿ ಅಂತ ಹೇಳುತ್ತದೆ. ಎಫ್ ಸಿ ಐ ನಿಂದ ಪುಕ್ಸಟ್ಟೆ ಅಕ್ಕಿ ಕೊಡಿ ಅಂತ ಕರ್ನಾಟಕ ಸರ್ಕಾರವೇನೂ ಹೇಳಿಲ್ಲ, ಆದರೆ ಕೇಂದ್ರ ಮಾತ್ರ ತಾರತಮ್ಯ ನೀತಿ ಪ್ರದರ್ಶಿಸುತ್ತಿದೆ ಎಂದು ಖರ್ಗೆ ಹೇಳಿದರು. ಚುನಾವಣೆ ಸಮಯದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಜನರಿಗೆ, ನೀವು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡದಿದ್ದರೆ ಕೇಂದ್ರದಿಂದ ಯಾವ ನೆರವೂ ಸಿಗದು ಅಂತ ಹೆದರಿಸಿದ್ದು ನಿಜವಾಗುತ್ತಿದೆ. ರಾಜ್ಯದ 25 ಬಿಜೆಪಿ ಸಂಸದರು ದಮ್ ಇದ್ದರೆ ದೆಹಲಿಯಲ್ಲಿ, ಜಂತರ್ ಮಂತರ್ ನಲ್ಲಿ ಅಕ್ಕಿಗಾಗಿ ಪ್ರತಿಭಟನೆ ನಡೆಸಲಿ ಎಂದು ಸಚಿವರು ಸವಾಲೆಸೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ