ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಯಲಿ, ಯಾರು ಸಾಚಾ ಅನ್ನೋದು ಗೊತ್ತಾಗುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್

Updated on: Apr 14, 2025 | 11:14 AM

ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರತಿಭಟನೆ ಮಾಡುತ್ತಿದ್ದಾರೆ, ಮತ್ತೊಂದು ಕಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿರುವುದಕ್ಕೆ ಕಾಂಗ್ರೆಸ್ ನವರು ಕೇಂದ್ರ ಸರ್ಕಾರದ ವಿರುದ್ಧ ಧರಣಿಗೆ ಕೂತಿದ್ದಾರೆ, ಪ್ರತಿಭಟನೆಗಳ ಭರಾಟೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಮತ್ತು ಒಂದು ಕುಟುಂಬದ ವೈಭವೀಕರಣ ನಡೆಯಬಾರದು ಎಂದು ಯತ್ನಾಳ್ ಹೇಳಿದರು.

ವಿಜಯಪುರ, ಏಪ್ರಿಲ್ 14: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸರ್ಕಾರ ಅಧಿಕಾರಲ್ಲಿದ್ದಾಗ 40 ಪರ್ಸೆಂಟ್ ಕಮೀಶನ್ ನಡೆದಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪಗಳ ತನಿಖೆಗೆ ಸರ್ಕಾರ ಎಸ್​ಐಟಿ ರಚಿಸಿರುವುದು ಸಾಧನೆ ಅಲ್ಲ, ಅಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಸಿಬಿಐ, ಎನ್​ಐಎ ತನಿಖೆಗಾದರೂ ಕೊಡಲಿ ಅಂತ ಹೇಳಿದ್ದಾರೆ ಎಂದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಅಂತ ಗುತ್ತಿಗೆದಾರರು ಹೇಳುತ್ತಾರೆ, ತನಿಖೆ ನಡೆಯಲಿ, ಭ್ರಷ್ಟಾಚಾರ ಯಾರು ಮಾಡಿದ್ದಾರೆ ಅಂತ ಜನಕ್ಕೆ ಗೊತ್ತಾಗಬೇಕು ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:    ಯತ್ನಾಳ್ ಟಿಪ್ಪೂ ಖಡ್ಗ ಹಿಡಿದು ಕುಣಿದಾಡಿದ, ಇಫ್ತಿಯಾರ್ ಕೂಟ ನಡೆಸಿದ ಫೋಟೋಗಳು ನಮ್ಮಲ್ಲಿವೆ: ರೇಣುಕಾಚಾರ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ