India-Pakistan War Update: ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಪಾಕ್ ಹೇಳಿದ ಸುಳ್ಳುಗಳನ್ನು ವಿವರಿಸಿದ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ

Updated on: May 10, 2025 | 9:11 PM

ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಾಯುನೆಲೆ, ಮತ್ತು ಮಿಲಿಟರಿ ನೆಲೆಗಳಿಗೆ ಸಾಕಷ್ಟು ಹಾನಿಯನ್ನುಂಟು ಮಾಡಿವೆ, ವಾಯುನೆಲೆಗಳನ್ನು ಧ್ವಂಸ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೊಳಿಸಲಾಗಿದೆ, ಹಾಗೆಯೇ ನಮ್ಮ ಸೇನೆಯು ಗಡಿರೇಖೆ ಬಳಿ ಪಾಕಿಸ್ತಾನದ ಮಿಲಿಟರಿ ಮತ್ತು ಲಾಜಿಸ್ಟಿಕ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಹಾಳು ಮಾಡುವುದರ ಜೊತೆಗೆ ಸಿಬ್ಬಂದಿಗೂ ಬಹಳಷ್ಟು ಹಾನಿಯನ್ನುಂಟು ಮಾಡಿದೆ ಎಂದು ಸೋಫಿಯಾ ಖುರೇಷಿ ಹೇಳಿದರು.

ಬೆಂಗಳೂರು, ಮೇ 10: ಕದನ ವಿರಾಮ ಘೋಷನೆ ಬಳಿಕ ಪ್ರೆಸ್ ಬ್ರೀಫಿಂಗ್​ನಲ್ಲಿ ಮಾತಾಡಿದ ಲೆಫ್ಟಿನೆಟ್ ಕರ್ನಲ್ ಸೋಫಿಯಾ ಖುರೇಷಿ ಕಳೆದ 2-3 ದಿನಗಳಲ್ಲಿ ಪಾಕಿಸ್ತಾನವು ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಹಬ್ಬಿಸಿದ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ವಿವರಿಸಿದರು. ಪಾಕಿಸ್ತಾನದ ಸೇನಾಧಿಕಾರಿಗಳಿಗೆ ತಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಿರಲಿಲ್ಲ, ಭಾರತದ ವಾಯುಸೇನೆ ಪಾಕಿಸ್ತಾನದಲ್ಲಿರುವ ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿಯನ್ನುಂಟು ಮಾಡಿಲ್ಲ, ಅವರು ಹೇಳಿದ್ದು ಸುಳ್ಳು ಯಾಕೆಂದರೆ ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದೆ ಮತ್ತು ಅದರ ಸೇನೆಯು ಸಂವಿಧಾನಿಕ ಮೌಲ್ಯಗಳಲ್ಲಿ ಅಪಾರ ವಿಶ್ವಾಸವಿಟ್ಟುಕೊಂಡಿದೆ ಎಂದು ಖುರೇಷಿ ಹೇಳಿದರು. ಹಾಗೆಯೇ, ಪಾಕಿಸ್ತಾನದ ಸೇನೆಯು ಭಾರತದ ಯಾವುದೇ ವಾಯುನೆಲೆ, ಶಸ್ತ್ರಾಗಾರಗಳಿಗೆ ಹಾನಿಯನ್ನುಂಟು ಮಾಡಿಲ್ಲ, ಪಾಕಿಸ್ತಾನ ಹೇಳಿದ್ದು ಸುಳ್ಳು ಎಂದು ಖುರೇಷಿ ಹೇಳಿದರು.

ಇದನ್ನೂ ಓದಿ:  ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ