ಭಾರತದ ಸೌಂದರ್ಯ ದೇವತೆಯರ ಪರಂಪರೆಯನ್ನು ಮಾನುಷಿ ಚಿಲ್ಲರ್ ಮುಂದುವರಿಸಿದ್ದಾರೆ!
ಮಾನುಷಿ. ಭಾರತ ಮತ್ತು ವಿಶ್ವ ಸುಂದರಿಯಾಗಿರುವುದರಿಂದ ಆಕೆಯ ಸೌಂದರ್ಯದ ಬಗ್ಗೆ ಮಾತಾಡುವುದು, ಕಾಮೆಂಟ್ ಮಾಡುವುದು ಅಸಂಬದ್ಧ ಅನಿಸುತ್ತದೆ.
ಯುವತಿಯರು ಮುಗುಳ್ನಕ್ಕಾಗ ಕೆನ್ನೆಯಲ್ಲಿ ಡಿಂಪಲ್ ಬಿದ್ದರೆ ಅವರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಬಾಲಿವುಡ್ ಮತ್ತು ಗ್ಲಾಮರ್ ಪ್ರಪಂಚದಲ್ಲಿ ಹಲವು ಗುಳಿಕೆನ್ನೆ ಸುಂದರಿಯರನ್ನು ನಾವು ಕಂಡಿದ್ದೇವೆ. ನಟ ಸೈಫ್ ಅಲಿ ಖಾನ್ ಅವರ ಅಮ್ಮ ಶರ್ಮಿಳಾ ಟಾಗೋರ್ ಅವರ ನೆನಪಿದೆ ತಾನೆ? ಈ ಹಿರಿಯ ನಟಿ ತಮ್ಮ ಗುಳಿ ಬೀಳುವ ಕೆನ್ನೆಯಿಂದಲೇ ಆಗ ಭಾರತೀಯ ಟೀಮಿನ ಕ್ರಿಕೆಟ್ ಕ್ಯಾಪ್ಟನ್ ಮತ್ತು ಪಟೌಡಿ ಸಂಸ್ಥಾನ ನವಾಬರಾಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೃದಯ ಕದ್ದಿದ್ದರು. ಅವರಿಗಿಂತ ಮೊದಲು ಮತ್ತು ನಂತರವೂ ಕೆಲ ಗುಳಿಕೆನ್ನೆ ಸುಂದರಿಯರನ್ನು ಬಾಲಿವುಡ್ ಕಂಡಿದೆ. ಈಗಿನ ಅಂಥ ಕೆನ್ನೆಯ ಸುಂದರಿಯರಲ್ಲಿ 2017 ರಲ್ಲಿ ಮಿಸ್ ಇಂಡಿಯ ಜೊತೆಗೆ ವಿಶ್ವ ಸುಂದರಿ ಪಟ್ಟವನ್ನೂ ಧರಿಸಿದ ಬಳ್ಳಿಯಂತೆ ಬಳುಕುವ 24 ರ ಬೆಡುಗಿ ಮಾನುಷಿ ಚಿಲ್ಲರ್ ಗಮನ ಸೆಳೆಯುತ್ತಾರೆ.
ಮಾನುಷಿ. ಭಾರತ ಮತ್ತು ವಿಶ್ವ ಸುಂದರಿಯಾಗಿರುವುದರಿಂದ ಆಕೆಯ ಸೌಂದರ್ಯದ ಬಗ್ಗೆ ಮಾತಾಡುವುದು, ಕಾಮೆಂಟ್ ಮಾಡುವುದು ಅಸಂಬದ್ಧ ಅನಿಸುತ್ತದೆ. ಭಾರತದಲ್ಲಿ ಒಂದು ಪರಂಪರೆ ಶುರುವಾಗಿಬಿಟ್ಟಿದೆ. ಸೌಂದರ್ಯ ಸ್ಪರ್ಧೆಗಳನ್ನು ಗೆದ್ದು ಬರುವ ಬೆಡಗಿಯರೆಲ್ಲ ಸಿನಿಮಾ ತಾರೆಯರಾಗುತ್ತಿದ್ದಾರೆ. ಐಶ್ವರ್ಯ ರೈ ಬಚ್ಚನ್, ಸುಶ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ, ಲಾರಾ ದತ್ತಾ, ಡಯನಾ ಹೇಡೆನ್ ಈ ಪಟ್ಟಿ ಬೆಳೆಯುತ್ತಿದ್ದು ಮಾನುಷಿ ಅದಕ್ಕೆ ರೀಸೆಂಟ್ ಸೇರ್ಪಡೆ.
ಮಾಡ್ ಉಡುಗೆಯಲ್ಲಿ ಹೆಚ್ಚು ಆಕರ್ಷಕಳಾಗಿ ಕಾಣುವ ಮಾನುಷಿ ನಟಿಸಿದ ಮೊದಲ ಹಿಂದಿ ಚಿತ್ರ ‘ಪೃಥ್ವಿರಾಜ್’ ಬಿಡುಗಡೆಯಾಗಿದೆ. ಆಕೆಯ ಎರಡು ಚಿತ್ರಗಳು- ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಮತ್ತು ಅಜಯ ದೇವಗನ್ ನಾಯಕನಾಗಿರರುವ ಇನ್ನೂ ಹೆಸರಿಡದ ಚಿತ್ರ ಬಿಡುಗಡೆಯಾಗಬೇಕಿದೆ. ಮೇಲೆ ತಿಳಿಸಿದ ಸುಂದರಿಯರ ಹಾಗೆ ಮಾನುಷಿ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಾಳೆಯೇ ಅಂತ ಕಾದುನೋಡಬೇಕು.
ಇದನ್ನೂ ಓದಿ: ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಬರ್ತ್ ಡೇ ಪಾರ್ಟಿ, ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ