Dharwad: ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಚುನಾವಣಾ ಸಿಬ್ಬಂದಿ: ಮತದಾರರು ಆಕ್ರೋಶ

Dharwad: ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಚುನಾವಣಾ ಸಿಬ್ಬಂದಿ: ಮತದಾರರು ಆಕ್ರೋಶ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:May 07, 2024 | 5:02 PM

ಚುನಾವಣಾ ಸಿಬ್ಬಂದಿಗಳು ಊಟ ಮಾಡಲು ಮತದಾನ ಸ್ಥಗಿತಗೊಳಿಸಿದ್ದು, ಸ್ಥಳೀಯರ ಆಕ್ರೋಶ ಕಾರಣವಾಗಿರುವಂತಹ ಘಟನೆ ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಕುಮಾರೇಶ್ವರನಗರ, ಮೂಕಾಂಬಿಕಾನಗರ, ನೀರಾವರಿ ಕ್ವಾರ್ಟರ್ಸ್‌ಗೆ ಸಂಬಂಧಿಸಿದ ಮತಗಟ್ಟೆ ಸಂಖ್ಯೆ 180ರಲ್ಲಿ ನಡೆದಿದೆ. ಆ ಮೂಲಕ ಚುನಾವಣಾ ಸಿಬ್ಬಂದಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಸಿಬ್ಬಂದಿ ಊಟ ಮುಗಿಯುವವರೆಗೆ ಮತದಾರರು ಮತಗಟ್ಟೆ ಹೊರಗಡೆ ಕಾದು ನಿಂತಿದ್ದರು.

ಧಾರವಾಡ, ಮೇ 07: ಧಾರವಾಡ ಲೋಕಸಭೆ ಕ್ಷೇತ್ರದ (dharwad lok sabha constituency) ಮತಗಟ್ಟೆಯಲ್ಲಿ ಊಟಕ್ಕಾಗಿ ಮತದಾನವನ್ನೇ (voting) ನಿಲ್ಲಿಸುವ ಮೂಲಕ ಸಿಬ್ಬಂದಿ‌ಗಳು ಎಡವಟ್ಟು ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ. 180ರಲ್ಲಿ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ತೆಗೆದುಕೊಂಡಿದ್ದಾರೆ. ಮತದಾರರನ್ನು ಕ್ಯೂ ನಿಲ್ಲಿಸಿ ಮತಗಟ್ಟೆ ಬಾಗಿಲು ಹಾಕಿ ಊಟಕ್ಕೆ ಕುಳಿತುಕೊಂಡಿದ್ದಾರೆ. ಸಿಬ್ಬಂದಿ ಊಟ ಮುಗಿಯುವವರೆಗೆ ಮತದಾರರು ಕಾಯುತ್ತಾ ನಿಂತಿದ್ದಾರೆ. ಮತದಾನ ನಿಲ್ಲಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಿಯಮ ಬಾಹಿರ ಕ್ರಮ. ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಸುಮಾರ 20 ನಿಮಿಷ ಮತದಾನ ನಿಲ್ಲಿಸಲಾಗಿದೆ. ಹೀಗಾಗಿ 20 ನಿಮಿಷ ಹೆಚ್ಚುವರಿ ವೇಳೆ ನೀಡಲು ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 07, 2024 04:59 PM