ಬೆಂಗಳೂರಿನ ಮೇಖ್ರಿ ಸರ್ಕಲ್ ನಲ್ಲಿ ಬೈಕ್ ಸವಾರನ ಮೇಲೆ ಹರಿದ ಲಾರಿ ಅವನನ್ನು 300 ಮೀಟರ್ ವರೆಗೆ ಎಳೆದೊಯ್ಯಿತು!
ಒನ್ ವೇನಲ್ಲಿ ತೆರಳುತ್ತಿದ್ದ ಬೈಕ್ ಸವಾರೊಬ್ಬನ ಮೇಲೆ ಲಾರಿ ಹರಿದು ಅವನನ್ನು ಬೈಕ್ ಸಮೇತ 300 ಮೀಟರ್ ವರೆಗೆ ಎಳೆದೊಯ್ದಿದೆ.
ಬೆಂಗಳೂರು: ದುರ್ಬಲ ಹೃದಯದವರು ಈ ವಿಡಿಯೋ ನೋಡದಿರುವುದೇ ಲೇಸು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನ ಮೇಖ್ರಿ ಸರ್ಕಲ್ (Mekhri Circle) ಬಳಿಯ ಪೆಟ್ರೋಲ್ ಬಂಕೊಂದರ ಎದುರುಗಡೆ ನಡೆದ ಭೀಕರ ಅಪಘಾತವಿದು. ಒನ್ ವೇನಲ್ಲಿ ತೆರಳುತ್ತಿದ್ದ ಬೈಕ್ ಸವಾರೊಬ್ಬನ (biker) ಮೇಲೆ ಲಾರಿ ಹರಿದು ಅವನನ್ನು ಬೈಕ್ ಸಮೇತ 300 ಮೀಟರ್ ವರೆಗೆ ಎಳೆದೊಯ್ದಿದೆ. ಸವಾರನ ಸ್ಥಿತಿ ಏನಾಗಿರುತ್ತೆ ನೀವು ಊಹಿಸಬಹುದು. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.