ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕೇಳಿದ ಪ್ರಶ್ನೆಗೆ ಕೈಗಾರಿಕಾ ಸಚಿವ ನಿರಾಣಿಯವರಲ್ಲಿ ಉತ್ತರವಿರಲಿಲ್ಲ

ಹಿಂದೆ ಇದೇ ಖಾತೆ ನಿರ್ವಹಿಸುತ್ತಿದ್ದ ಆರ್ ವಿ ದೇಶಪಾಂಡೆ ಅವರು ಭೂಸ್ವಾಧೀನ ಪ್ರಕ್ರಿಯೆ ವಿವರಿಸಿದಾಗ ನಿರಾಣಿ ನಿರುತ್ತರರಾದರು

TV9kannada Web Team

| Edited By: Arun Belly

Sep 16, 2022 | 1:47 PM

ಬೆಂಗಳೂರು: ಕೆಜಿಎಫ್ ಸಿನಿಮಾನೂ ಜೋರು ಮತ್ತು ಆ ಭಾಗದ ಜನರು ಕೂಡ ಅಷ್ಟೇ ಜೋರು ಅನಿಸುತ್ತೆ ಮಾರಾಯ್ರೇ. ವಿಧಾನ ಮಂಡಲದ ಕಾರ್ಯಕಲಾಪಗಳಲ್ಲಿ ಇಂದು ಕೆಜಿಎಫ್ ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ (Roopkala Shashidhar) ಅವರು ತಮ್ಮ ಕ್ಷೇತ್ರವನ್ನು ಕೈಗಾರಿಕಾ ಹಬ್ (Industrial Hub) ಆಗಿ ಪರಿವರ್ತಿಸಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಕೈಗಾರಿಕಾ ಸಚಿವರ ಮುರುಗೇಶ್ ನಿರಾಣಿ (Murugesh Nirani) ಅವರ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಸದನದ ಗಮನಕ್ಕೆ ತಂದಾಗ ಸಚಿವರು ಏನೇನೂ ಸಬೂಬು ಹೇಳುವ ಪ್ರಯತ್ನ ಮಾಡಿದರು. ಹಿಂದೆ ಇದೇ ಖಾತೆ ನಿರ್ವಹಿಸುತ್ತಿದ್ದ ಆರ್ ವಿ ದೇಶಪಾಂಡೆ ಅವರು ಭೂಸ್ವಾಧೀನ ಪ್ರಕ್ರಿಯೆ ವಿವರಿಸಿದಾಗ ನಿರಾಣಿ ನಿರುತ್ತರರಾದರು

Follow us on

Click on your DTH Provider to Add TV9 Kannada