ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗ ಸಿಕ್ಕಿತು! ಮುಖ್ಯಮಂತ್ರಿ ಸಿದ್ದರಾಮಯ್ಯ
ಸೋಮಣ್ಣ ಮತ್ತು ಸಿದ್ದರಾಮಯ್ಯ ಆತ್ಮೀಯವಾಗಿ ಮಾತಾಡುವುದನ್ನು ಕುರ್ಚಿಯಲ್ಲಿ ಆಸೀನರಾಗಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಕುತೂಹಲದಿಂದ ನೋಡುತ್ತಾರೆ. ಬೊಮ್ಮಾಯಿ ಪಕ್ಕದಲ್ಲಿ ಶೋಭಾ ಕರಂದ್ಲಾಜೆ ಕೂತಿದ್ದಾರೆ. ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತು, ಅದರೆ ಅದು ಹುಸಿ ಹೋಗಿದೆ.
ದೆಹಲಿ: ಮುಂದೆ ಏನೋ ಹೇಗೋ ಗೊತ್ತಿಲ್ಲ ಮಾರಾಯ್ರೇ. ಆದರೆ ಇವತ್ತು ಮಾತ್ರ ರಾಜ್ಯದ ನಾಯಕರು ದೆಹಲಿಯಲ್ಲಿ ಪಕ್ಷಭೇದ ಮರೆತು ಆತ್ಮೀಯತೆಯಿಂದ ಮಾತಾಡಿದರು ಮತ್ತು ಪರಸ್ಪರ ಜೋಕ್ ಗಳನ್ನು ಕಟ್ ಮಾಡಿಕೊಂಡರು. ವಿ ಸೋಮಣ್ಣ, ಸಿದ್ದರಾಮಯ್ಯ, ಡಿಕೆ ಶಿವಕುಮಅರ್ ಮತ್ತು ಜಿ ಪರಮೇಶ್ವರ್ ಅವರು ದೆಹಲಿಯ ಹೋಟೆಲೊಂದರಲ್ಲಿ ನಿಂತು ಲೋಕಾಭಿರಾಮವಾಗಿ ಹರಟುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಸಲಿಗೆ ಸೋಮಣ್ಣ ಮತ್ತು ಸಿದ್ದರಾಮಯ್ಯ ಸುಮಾರು ನಾಲ್ಕು ದಶಕಗಳಿಂದ ಸ್ನೇಹಿತರು. ಇಬ್ಬರೂ ಮೊದಲು ಜನತಾ ದಳ ಪಕ್ಷದ್ಲಲಿದ್ದವರು. ಇಲ್ಲಿ ಸಿದ್ದರಾಮಯ್ಯ ಹೇಳುತ್ತಿರೋದನ್ನು ಕೇಳಿ. ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ನನ್ನ ವಿರುದ್ಧ ವರುಣ ಕ್ಷೇತ್ರದಲ್ಲಿ ನಿಂತು ಸೋತಿದ್ದಕ್ಕೆ ಅದೃಷ್ಟ ಖುಲಾಯಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಸೋಮಣ್ಣ ಸೀಲಿಂಗ್ ಹಾರಿಹೋಗುವ ಹಾಗೆ ನಗುತ್ತಾರೆ. ಅವರ ನಗುವಿನಲ್ಲಿ ಪರಮೇಶ್ವರ್ ಮತ್ತು ಶಿವಕುಮಾರ್ ಸಹ ಜೊತೆಯಾಗುತ್ತಾರೆ. ನಂತರ ಶಿವಕುಮಾರ್ ಸಹ ಜೋಕ್ ಕಟ್ ಮಾಡುತ್ತಾರೆ ಆದರೆ ಅವರು ಹೇಳಿದ್ದು ಸರಿಯಾಗಿ ಕೇಳಿಸುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?