ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ ಎಲ್‌ಪಿಜಿ ಟ್ಯಾಂಕರ್

Updated on: Mar 16, 2026 | 9:51 PM

ಹಾರ್ಮುಜ್ ಜಲಸಂಧಿಯನ್ನು ದಾಟಿದ ಶಿವಾಲಿಕ್ ಎಲ್​ಪಿಜಿ ಟ್ಯಾಂಕರ್ ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿದೆ. ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಇರಾನಿನ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು ದಾಟಲು ಅನುಮತಿ ನೀಡಿದ್ದರು. ಅವುಗಳಲ್ಲಿ ಒಂದು ಶಿವಾಲಿಕ್, ಇನ್ನೊಂದು ಹಡಗು ನಂದಾ ದೇವಿ. ಹಾರ್ಮುಜ್ ಜಲಸಂಧಿ ದಾಟಿರುವ ಶಿವಾಲಿಕ್ ಹಡಗು ಎಲ್​ಪಿಜಿಯನ್ನು ಹೊತ್ತು ಗುಜರಾತ್​​ನ ಮುಂದ್ರಾ ಬಂದರನ್ನು ತಲುಪಿದೆ. 

ಅಹಮದಾಬಾದ್, ಮಾರ್ಚ್ 16: ಎಲ್‌ಪಿಜಿ ಸಾಗಿಸುವ ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಇರಾನಿನ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಲು ಅನುಮತಿ ನೀಡಿದ್ದರು. ಅವುಗಳಲ್ಲಿ ಒಂದು ಶಿವಾಲಿಕ್, ಇನ್ನೊಂದು ಹಡಗು ನಂದಾ ದೇವಿ. ಹಾರ್ಮುಜ್ ಜಲಸಂಧಿ ದಾಟಿರುವ ಶಿವಾಲಿಕ್ ಹಡಗು ಎಲ್​ಪಿಜಿಯನ್ನು ಹೊತ್ತು ಗುಜರಾತ್​​ನ ಮುಂದ್ರಾ ಬಂದರನ್ನು ತಲುಪಿದೆ. ನಂದಾ ದೇವಿ ಹಡಗು ನಾಳೆ ಕಾಂಡ್ಲಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಡಗುಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತೊಯ್ದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Mar 16, 2026 09:45 PM
Follow Us