ನಂಗೆ ಲಾಠಿಯಿಂದ ಹೊಡೆದವ್ನು ಸಸ್ಪೆಂಡ್​ ಆಗಬೇಕು, ಸಿಡಿದೆದ್ದ ಯುವತಿ

Updated on: Sep 08, 2025 | 8:52 PM

ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಹಿಂದೂ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿ ಆಕ್ರೋಶ ಹಾಕಿದ್ದಾರೆ. ಆದ್ರೆ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಇದಕ್ಕೆ ಆಕ್ರೋಶಗಳು ವ್ಯಕ್ತವಾಗಿವೆ. ಇನ್ನು ಲಾಠಿ ಚಾರ್ಜ್ ವೇಳೆ ಪೊಲೀಸ್ ಒಬ್ಬರು ಜ್ಯೋತಿ ಎನ್ನುವ ಯುವತಿಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಜ್ಯೋತಿ ನೋವಿನಲ್ಲೇ ರಸ್ತೆ ಮೇಲೆ ಕುಳಿತು ಗೋಳಾಡಿದ್ದಾಳೆ. ಇನ್ನು ಲಾಠಿ ಏಟಿಗೆ ಆಕ್ರೋಶಗೊಂಡಿರುವ ಜ್ಯೋತಿ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ. ಹೊಡೆದ ಪೊಲೀಸ್ ಸಸ್ಪೆಂಡ್ ಆಗಬೇಕೆಂದು ಪಟ್ಟು ಹಿಡಿದಿದ್ದಾಳೆ.

ಮಂಡ್ಯ, (ಸೆಪ್ಟೆಂಬರ್ 08): ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಹಿಂದೂ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿ ಆಕ್ರೋಶ ಹಾಕಿದ್ದಾರೆ. ಆದ್ರೆ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಇದಕ್ಕೆ ಆಕ್ರೋಶಗಳು ವ್ಯಕ್ತವಾಗಿವೆ. ಇನ್ನು ಲಾಠಿ ಚಾರ್ಜ್ ವೇಳೆ ಪೊಲೀಸ್ ಒಬ್ಬರು ಜ್ಯೋತಿ ಎನ್ನುವ ಯುವತಿಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಜ್ಯೋತಿ ನೋವಿನಲ್ಲೇ ರಸ್ತೆ ಮೇಲೆ ಕುಳಿತು ಗೋಳಾಡಿದ್ದಾಳೆ. ಇನ್ನು ಲಾಠಿ ಏಟಿಗೆ ಆಕ್ರೋಶಗೊಂಡಿರುವ ಜ್ಯೋತಿ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ. ಹೊಡೆದ ಪೊಲೀಸ್ ಸಸ್ಪೆಂಡ್ ಆಗಬೇಕೆಂದು ಪಟ್ಟು ಹಿಡಿದಿದ್ದಾಳೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More