ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಯತ್ನಾಳ್ ಗೆ ಫುಲ್ ಡಿಮ್ಯಾಂಡ್
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದ ಮಂಡ್ಯದ ಮದ್ದೂರು ಪಟ್ಟಣ ಉದ್ವಿಗ್ನವಾಗಿದ್ದು, ಕಲ್ಲು ತೂರಾಟ ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 09) ಮದ್ದೂರು ಬಂದ್ ಗೆ ಕರೆ ನೀಡಿವೆ. ಇನ್ನು ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಹ ಬೆಂಬಲ ಸೂಚಿಸಿದೆ. ಇನ್ನು ಮದ್ದೂರಿನಲ್ಲಿ ಠಿಕಾಣಿ ಹೂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಪ್ರತಿಭಟನಾ ಸಭೆಯಲ್ಲಿ ಕಲ್ಲು ತೂರಿದವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ಯತ್ನಾಳ್ ಯತ್ನಾಳ್ ಎಂದು ಕೂಗಿದ್ದಾರೆ. ಈ ವೇಳೆ ಸಿಂಹ, ಯತ್ನಾಳ್ ಅವರನ್ನು ಇಲ್ಲಿಗೆ ಕರೆಸೋಣ ಎಂದು ಸಮಾಧಾನಪಡಿಸಿದರು.
ಮಂಡ್ಯ, (ಸೆಪ್ಟೆಂಬರ್ 08): ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದ ಮಂಡ್ಯದ ಮದ್ದೂರು ಪಟ್ಟಣ ಉದ್ವಿಗ್ನವಾಗಿದ್ದು, ಕಲ್ಲು ತೂರಾಟ ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 09) ಮದ್ದೂರು ಬಂದ್ ಗೆ ಕರೆ ನೀಡಿವೆ. ಇನ್ನು ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಹ ಬೆಂಬಲ ಸೂಚಿಸಿದೆ. ಇನ್ನು ಮದ್ದೂರಿನಲ್ಲಿ ಠಿಕಾಣಿ ಹೂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಪ್ರತಿಭಟನಾ ಸಭೆಯಲ್ಲಿ ಕಲ್ಲು ತೂರಿದವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ಯತ್ನಾಳ್ ಯತ್ನಾಳ್ ಎಂದು ಕೂಗಿದ್ದಾರೆ. ಈ ವೇಳೆ ಸಿಂಹ, ಯತ್ನಾಳ್ ಅವರನ್ನು ಇಲ್ಲಿಗೆ ಕರೆಸೋಣ ಎಂದು ಸಮಾಧಾನಪಡಿಸಿದರು.
