ಮಹಾ ಶಿವರಾತ್ರಿ: ಹೂ, ಹಣ್ಣು, ತರಕಾರಿಗಳಿಂದ ಮಾದಪ್ಪನ ದೇಗುಲ ಅಲಂಕಾರ
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿಜೃಂಭಣೆಯ ಜಾತ್ರೆ ನಡೆಯುತ್ತಿದೆ. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸಿದ್ದಾರೆ. ಮಾದಪ್ಪನ ದೇಗುಲವನ್ನು ಅಲಂಕರಿಸಲಾಗಿದ್ದು, ವಿವಿಧ ಪೂಜೆಗಳು ನಡೆಯುತ್ತಿವೆ. ಉರುಳು ಸೇವೆ, ಪಂಜಿನ ಸೇವೆ, ಹುಲಿ ವಾಹನ, ಬಸವ ವಾಹನ ಮುಂತಾದ ಉತ್ಸವಗಳು ಜರುಗುತ್ತಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಜಾತ್ರೆ ಮಹತ್ವದ ಧಾರ್ಮಿಕ ಕಾರ್ಯಕ್ರಮವಾಗಿದೆ.
ಚಾಮರಾಜನಗರ, ಫೆಬ್ರವರಿ 26: ಮಹಾ ಶಿವರಾತ್ರಿ (Mha Shivaratri) ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ (Mahadeshwara Hill) ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ. ಇನ್ನು ಮಹಾ ಶಿವರಾತ್ರಿ ಪ್ರಯುಕ್ತ ಮಾದಪ್ಪನ ದೇಗುಲವನ್ನು ಹೂವು, ಹಣ್ಣು, ತರಕಾರಿಗಳಿಂದ ಅಲಂಕರಿಸಲಾಗಿದೆ. ಮಾದಪ್ಪನ ದೇಗುಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಿದ್ದಾರೆ. ಉರುಳು ಸೇವೆ, ಪಂಜಿನ ಸೇವೆ ಮೂಲಕ ಮಾದೇಶ್ವರನ ಸ್ಮರಣೆ ಮಾಡುತ್ತಿದ್ದಾರೆ. ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪಗಳ ಉತ್ಸವ ಮಾಡುತ್ತಿದ್ದಾರೆ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
