ಮೇಕ್ ಇನ್ ಇಂಡಿಯಾ ಲಾವಾ ಅಗ್ನಿ 5ಜಿ ಮತ್ತು ಮೇಡ್ ಇನ್ ಚೀನಾ ರೆಡ್ಮಿ ನೋಟ್ 11ಟಿ 5ಜಿ; ಯಾವುದು ಉತ್ತಮ ಇವೆರಡಲ್ಲಿ?
ರೆಡ್ಮಿ ನೋಟ್ 11ಟಿ ಹಲವಾರು ಕಾನ್ಫ್ಯುಗರೇಶನ್ ಗಳಲ್ಲಿ ಲಭ್ಯವಿದ್ದರೆ, ಲಾವಾ ಅಗ್ನಿ 5ಜಿ ಒಂದು ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಈ ಎರಡೂ ಸ್ಮಾರ್ಟ್ಫೋನ್ಗಳು 5000ಎಮ್ ಎ ಎಚ್ ಬ್ಯಾಟರಿಗಳನ್ನು ಹೊಂದಿವೆ.
ರೆಡ್ಮಿ ನೋಟ್ 11ಟಿ 5ಜಿ ಭಾರತದಲ್ಲಿ ಇತ್ತೀಚಿಗೆ ಲಾಂಚ್ ಆಗಿರುವ ಮಧ್ಯಮ ರೇಂಜಿನ ಸ್ಲಾರ್ಟ್ ಫೋನ್ ಆಗಿದೆ. ಅಷ್ಟು ಮಾತ್ರವಲ್ಲ ರೆಡ್ಮಿ 11 ಸರಣಿಯಲ್ಲಿ ಭಾರತಕ್ಕೆ ಕಾಲಿಟ್ಟ ಮೊದಲನೇ ಫೋನಾಗಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಫೋನಿಗೆ ಮೀಡಿಯಾ ಟೆಕ್ ಡೈಮಿನ್ಸಿಟಿ 810 ಚಿಪ್ ಸೆಟ್ ಅಳವಡಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ಮೇಕ್ ಇನ್ ಇಂಡಿಯ ಉತ್ಪಾದನೆ ಲಾವಾ ಅಗ್ನಿ 5ಜಿ ಫೋನ್ ಸಹ ಇದೆ ಚಿಪ್ ಸೆಟ್ ಹೊಂದಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಆಪ್ಷನ್ ಹೊಂದಿರುವ ಇವೆರಡು ಫೋನ್ಗಳ ಬೆಲೆ ಒಂದೇ ಆಗಿದೆ-ರೂ. 19,999. ಇದು ಜನರಲ್ಲಿ ಸಹಜವಾಗೇ ಗೊಂದಲ ಮೂಡಿಸುತ್ತದೆ. ಯಾವುದು ಉತ್ತಮ ಇವೆರಡರಲ್ಲಿ?
ಓಕೆ ನಾವೇ ಪರಿಶೀಲಿಸಿ ಬಿಡೋಣ ಮಾರಾಯ್ರೇ. ರೆಡ್ಮಿ ನೋಟ್ 11ಟಿ ಮತ್ತು ಲಾವಾ ಅಗ್ನಿ 5ಜಿ ಎರಡೂ 90 ಎಚ್ ಜೆಡ್ ಎಲ್ ಸಿ ಡಿ ಡಿಸ್ಪ್ಲೇಗಳನ್ನು ಹೊಂದಿವೆ. ರೆಡ್ಮಿ ನೋಟ್ 11ಟಿ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಡುಯಲ್ ಕೆಮೆರಾ ಸೆಟಪ್ ಹೊಂದಿದ್ದರೆ, ಲಾವಾ ಅಗ್ನಿ 5ಜಿ ಸ್ಪಾರ್ಟ್ ಫೋನಿನ ಹಿಂಭಾಗದಲ್ಲಿ 64-ಮೆಗಾಪಿಕ್ಸೆಲ್ ಕ್ವಾಡ್ ಕೆಮೆರಾಗಳನ್ನು ಹೊಂದಿದೆ.
ರೆಡ್ಮಿ ನೋಟ್ 11ಟಿ ಹಲವಾರು ಕಾನ್ಫ್ಯುಗರೇಶನ್ ಗಳಲ್ಲಿ ಲಭ್ಯವಿದ್ದರೆ, ಲಾವಾ ಅಗ್ನಿ 5ಜಿ ಒಂದು ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಈ ಎರಡೂ ಸ್ಮಾರ್ಟ್ಫೋನ್ಗಳು 5000ಎಮ್ ಎ ಎಚ್ ಬ್ಯಾಟರಿಗಳನ್ನು ಹೊಂದಿವೆ.
ಬೆಲೆಗಳನ್ನು ನೋಡುವುದಾದರೆ, 6ಜಿಬಿ ರ್ಯಾಮ್ ಮತ್ತು 64ಜಿಬಿ ಸ್ಟೋರೇಜ್ ಸಾಮರ್ಥ್ಯದ ರೆಡ್ಮಿ ನೋಟ್ 11ಟಿ ಬೇಸ್ ಮಾಡೆಲ್ ಸ್ಮಾರ್ಟ್ ಫೋನಿನ ಬೆಲೆ ರೂ. 16,999 ರಿಂದ ಆರಂಭವಾಗುತ್ತದೆ. ಹಾಗೆಯೇ, 6ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ರೆಡ್ಮಿ ನೋಟ್ 11ಟಿ ನಿಮಗೆ ರೂ. 17,999 ಕ್ಕೆ ಸಿಗುತ್ತದೆ.
ಈ ಸರಣಿಯ ಟಾಪ್-ಎಂಡ್ ಮಾಡೆಲ್ 8ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು ಅದರ ಬೆಲೆ ರೂ. 19,999 ಆಗಿದೆ.
ಆಗಲೇ ಹೇಳಿದಂತೆ ಲಾವಾ ಅಗ್ನಿ 5ಜಿ, 8ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಒಂದೇ ಆವೃತ್ತಿ ಹೊಂದಿದ್ದು ಅದರ ಬೆಲೆ ರೂ. 19,999 ಆಗಿದೆ. ಎರಡೂ ಫೋನ್ಗಳು 16-ಮೆಗಾಪಿಕ್ಸೆಲ್ ಸೆಲ್ಫೀ ಶೂಟರ್ಗಳನ್ನು ಹೊಂದಿವೆ.
ಇನ್ನು ಆಯ್ಕೆ ನಿಮ್ಮದು ಮಾರಾಯ್ರೇ!
ಇದನ್ನೂ ಓದಿ: ಭಾರತದ ಪ್ರತಿಭಾವಂತರು ವಿದೇಶಕ್ಕೆ ಹೋಗಿ ಸಾಧನೆ ಮಾಡಿದರೆ ತಪ್ಪೇನಲ್ಲ; ಇನ್ಫೋಸಿಸ್ ನಾರಾಯಣಮೂರ್ತಿ