ಪುನೀತ್ ಬಗ್ಗೆ ಭಾವುಕರಾಗಿ ಮಾತನಾಡಿದ ‘ಈ ಸುಂದರನ ಸನ್ಯಾಸಿ ಮಾಡಬಹುದೇ’ ಹಾಡಿನ ಗಾಯಕ

|

Updated on: Jun 21, 2023 | 9:10 AM

‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ..’ ಹಾಡನ್ನು ಮಳವಳ್ಳಿ ಮಹದೇವಸ್ವಾಮಿ ಅವರು ಹಾಡಿದ್ದಾರೆ. ಅವರು ಪುನೀತ್ ಬಗ್ಗೆ ಮಾತನಾಡಿದ್ದಾರೆ.

‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ..’ ಈ ಹಾಡು ಇತ್ತೀಚೆಗೆ ಸಖತ್ ಫೇಮಸ್ ಆಗಿದೆ. ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಈ ಹಾಡು ಹೆಚ್ಚು ಬಳಕೆಯಲ್ಲಿದೆ. ಇದನ್ನು ಮಳವಳ್ಳಿ ಮಹದೇವಸ್ವಾಮಿ ಅವರು ಹಾಡಿದ್ದಾರೆ. ಅವರಿಗೆ ರಾಜ್​ಕುಮಾರ್ (Rajkumar) ಕುಟುಂಬದ ಮೇಲೆ ವಿಶೇಷ ಪ್ರೀತಿ. ಪುನೀತ್ ರಾಜ್​ಕುಮಾರ್​ಗೆ (Puneeth Rajkumar) ಡಾಕ್ಟರೇಟ್ ಸಿಕ್ಕ ದಿನವೇ ಮಳವಳ್ಳಿ ಮಹದೇವಸ್ವಾಮಿ ಅವರಿಗೂ ಡಾಕ್ಟರೇಟ್ ಗೌರವ ಸಿಕ್ಕಿತ್ತು. ಆ ಬಗ್ಗೆ ಅವರು ಮಾತನಾಡಿದ್ದಾರೆ. ಆದಿನ ನನಗೆ ಆನಂದ ಭಾಷ್ಪ ಬಂದಿತ್ತು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ