PM Modi Karnataka Visit: ಯಾದಗಿರಿಯಿಂದ ಮಳಖೇಡ್ ಅಗಮಿಸಿದ ಪ್ರಧಾನಿಗಳನ್ನು ಕಂಡು ಮುಗಿಲು ಮುಟ್ಟಿದ ಜನರ ಹರ್ಷೋದ್ಗಾರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2023 | 3:06 PM

ಪ್ರಧಾನಿಗಳು 52 ತಾಂಡಾಗಳಲ್ಲಿ ವಾಸವಾಗಿರುವ ಬಂಜಾರಾ ಸಮುದಾಯದ ಲಕ್ಷಾಂತರ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳನ್ನು ಪೂರೈಸಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಲಬುರಗಿ ಜಿಲ್ಲೆಯ ಮಳಖೇಡಕ್ಕೆ (Malkhed) ಆಗಮಿಸಿದ್ದಾರೆ. ಅವರ ಆಗಮನಕ್ಕಾಗಿ ಲಕ್ಷಾಂತರ ಜನ ಬೆಳಗ್ಗೆಯಿಂದಲೇ ಕಾಯುತ್ತಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಪ್ರಧಾನಿಗಳು 52 ತಾಂಡಾಗಳಲ್ಲಿ ವಾಸವಾಗಿರುವ ಬಂಜಾರಾ ಸಮುದಾಯದ (Banjara community) ಲಕ್ಷಾಂತರ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ಈ ತಾಂಡಾಗಳನ್ನೆಲ್ಲ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ. ಪ್ರಧಾನಿಗಳು ಹೆಲಿಕಾಪ್ಟರ್ ಗಳಲ್ಲಿ ಆಗಮಿಸುತ್ತಿರುವುದನ್ನು ಮತ್ತು ಜನರ ಹರ್ಷೋದ್ಗಾರವನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ