ಕನ್ಫೆಷನ್ ರೂಂನಲ್ಲಿ ‘ಬಿಗ್ ಬಾಸ್’ ಎದುರೇ ನಿದ್ರಿಸಿದ ಮಲ್ಲಮ್ಮ
Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸ್ಪರ್ಧಿಯಾಗಿರೋ ಮಲ್ಲಮ್ಮ ಅವರ ಪ್ರೋಮೋನ ಬಿಗ್ ಬಾಸ್ ಕನ್ನಡ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಮಲ್ಲಮ್ಮ ಅವರು ಕ್ಯಾಮೆರಾ ಎದುರೇ ನಿದ್ರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಮಲ್ಲಮ್ಮ. ತಮ್ಮ ಮುಗ್ಧ ಮಾತುಗಳಿಂದ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಬಿಗ್ ಬಾಸ್ ಅವರನ್ನು ಕನ್ಫೆಷನ್ ರೂಂಗೆ ಕರೆದಿದ್ದರು. ಈ ವೇಳೆ ಬಿಗ್ ಬಾಸ್ ಮಾತನಾಡುವಾಗಲೇ ಅವರು ಮಲಗಿದಂತೆ ಕಂಡು ಬಂತು. ಆಮೇಲೆ ಒಮ್ಮೆಲೇ ಎಚ್ಚರವಾಗಿ, ಯೆಸ್ ಸರ್ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

