ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಆಗುವ ಅವಕಾಶವಿತ್ತು, ನೋವನ್ನು ಆಗಾಗ ಹೇಳಿಕೊಳ್ಳುತ್ತಾರೆ: ಜಾರಕಿಹೊಳಿ
ದೆಹಲಿಯಲ್ಲಿ ಇವತ್ತು ನಡೆಯುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ: ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳು ಕಾರ್ಯಕ್ರಮಕ್ಕೆ ತನಗೆ ಆಹ್ವಾನವಿರಲಿಲ್ಲ ಎಂದು ಹೇಳಿದ ಸತೀಶ್ ಜಾರಕಿಹೊಳಿ, ದೆಹಲಿ ಹೋಗಲು ತನಗೆ ಯಾವುದೇ ನಿರ್ಬಂಧಗಳಿಲ್ಲ, ಯಾವಾಗ ಬೇಕಾದರೂ ಹೋಗಬಹುದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೇರೆ ಬೇರೆ ಕೆಲಸಗಳಿಂದಾಗಿಯೂ ದೆಹಲಿ ಹೋಗಿದ್ದಾರೆ ಎಂದರು.
ಬೆಂಗಳೂರು, ಆಗಸ್ಟ್ 2: ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದಿದ್ದು ಸುಳ್ಳಲ್ಲ, ಆದರೆ ಕಾರಣಾಂತರಗಳಿಂದ ಅವಕಾಶ ತಪ್ಪಿತು ಎಂದು ಹೇಳಿದರು. ಅವಕಾಶ ಮಿಸ್ ಆದ ನೋವು ಅವರನ್ನು ಸದಾ ಕಾಡುತ್ತಿರುತ್ತದೆ, ಹಾಗಾಗಿ ಅದನ್ನು ಆಗಾಗ ಹೊರಹಾಕುತ್ತಿರುತ್ತಾರೆ ಎಂದು ಸತೀಶ್ ಹೇಳಿದರು. ತೊಂಬತ್ತರ ದಶಕದಲ್ಲಿ ಅವರು ರಾಜ್ಯ ಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದರಿಂದ ಮುಖ್ಯಮಂತ್ರಿ ಮಾಡುವ ಪ್ರಸ್ತಾಪ ಪುನಃ ಆಗಿರಲಿಕ್ಕಿಲಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಓಬಿಸಿ ಸಲಹಾ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಿಲ್ಲ: ಸತೀಶ್ ಜಾರಕಿಹೊಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
