ರಾಹುಲ್ ಮತ್ತು ಸಿದ್ದರಾಮಯ್ಯ ಕೈ ಮಲ್ಲಿಕಾರ್ಜುನ ಖರ್ಗೆ ಹಿಡಿದೆತ್ತಿದಾಗ ಸುರ್ಜೇವಾಲಾ ಕೈ ರಾಹುಲ್ ಹಿಡಿಯಲಿಲ್ಲ

Updated on: Aug 08, 2025 | 2:04 PM

ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ರಾಹುಲ್ ಗಾಂಧಿ, ಬೆಂಗಳೂರು ಸೆಂಟ್ರಲ್ ಮತಕ್ಷೇತ್ರದ ಭಾಗವಾಗಿರುವ ಮಹದೇವಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಸಹಸ್ರಗಟ್ಟಲೆ ನಕಲಿ ಮತದಾರರು ಬಿಜೆಪಿ ಪರ ವೋಟ್ ಮಾಡಿದ್ದಕ್ಕೆ ಪಕ್ಷದ ಅಭ್ಯರ್ಥಿ 32 ಸಾವಿರ ವೋಟುಗಳ ಅಂತರದಿಂದ ಗೆದ್ದರು ಅಂತ ಹೇಳಿದ್ದರು.

ಬೆಂಗಳೂರು, ಆಗಸ್ಟ್ 8: ನಗರದ ಫ್ರೀಡಂ ಪಾರ್ಕ್​ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಮತ ನಮ್ಮ ಹಕ್ಕು ಪ್ರತಿಭಟನಾ ರ‍್ಯಾಲಿ (protest rally) ನಡೆಸುತ್ತಿದ್ದಾರೆ. ವಿಶೇಷ ವಿಮಾನವೊಂದರಲ್ಲಿ ರಾಹುಲ್ ಗಾಂಧಿಯವರು ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಬೆಂಗಳೂರುಗೆ ಆಗಮಿಸಿದರು. ಫ್ರೀಡಂ ಪಾರ್ಕ್​ನಲ್ಲಿ ಹಾಕಿರುವ ಬೃಹತ್ ವೇದಿಕೆಗೆ ರಾಹುಲ್ ಬಂದಾಗ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಸ್ವಾಗತಿಸಿದರು. ವೇದಿಕೆಯ ಮೇಲೆ ಖರ್ಗೆ ತಮ್ಮ ಬಲಗೈಯಿಂದ ರಾಹುಲ್ ಮತ್ತು ಎಡಗೈಯಿಂದ ಸಿದ್ದರಾಮಯ್ಯನವರ ಕೈ ಹಿಡಿದು ಮೇಲೆತ್ತಿದ್ದರು. ಸಿದ್ದರಾಮಯ್ಯ ತಮ್ಮ ಪಕ್ಕದಲ್ಲಿದ್ದ ಡಿಕೆ ಶಿವಕುಮಾರ್ ಕೈ ಹಿಡಿದೆತ್ತಿದರೆ ರಾಹುಲ್ ತಮ್ಮ ಪಕ್ಕದಲ್ಲಿದ್ದ ರಂದೀಪ್ ಸುರ್ಜೇವಾಲಾ ಕೈ ಹಿಡಿದು ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಲ್ಲ.

ಇದನ್ನೂ ಓದಿ:  ಮತಕಳ್ಳತನ ಆರೋಪ ಮಾಡಿದ ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನ ಕೇಳಿದ ಬಿಜೆಪಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ