ಬಿಜೆಪಿ ಮಾಜಿ MLA​ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಶಾಸಕ, ಅಷ್ಟಕ್ಕೂ ಆಗಿದ್ದೇನು?

Updated By: ರಮೇಶ್ ಬಿ. ಜವಳಗೇರಾ

Updated on: Sep 23, 2025 | 10:26 PM

ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹಾಗೂ ಬಿಜೆಪಿಯ ಮಾಜಿ‌ ಶಾಸಕ ಮಂಜುನಾಥಗೌಡ ನಡುವಿನ ವಾಕ್ಸಮರ ಮುಂದುವರೆದಿದೆ. ಅಪ್ಪಂಗೇ ಹುಟ್ಟಿದ್ದೀಯಾ ಎಂಬ ಮಾಜಿ‌ MLA ಮಂಜುನಾಥಗೌಡ ಮಾತಿಗೆ ನಂಜೇಗೌಡ ಸುದ್ದಿಗೋಷ್ಠಿಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ‌ ಶಾಸಕ ಮಂಜುನಾಥಗೌಡನ 2ನೇ ಮುಖ ಅನಾವರಣಗೊಂಡಿದೆ. ಹೊಸಕೋಟೆ & ಕೋಡಿಹಳ್ಳಿ ಭಾಷೆ ಮಾಲೂರಿನ ಜನತೆಗೆ ಗೊತ್ತಾಗಿದೆ.

ಕೋಲಾರ, (ಸೆಪ್ಟೆಂಬರ್ 23): ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹಾಗೂ ಬಿಜೆಪಿಯ ಮಾಜಿ‌ ಶಾಸಕ ಮಂಜುನಾಥಗೌಡ ನಡುವಿನ ವಾಕ್ಸಮರ ಮುಂದುವರೆದಿದ್ದು, ರಾಜಜೀಯ ಆರೋಪ ಪ್ರತ್ಯಾರೋ ಇದೀಗ ವೈಯಕ್ತಿ ಬೈದಾಟಕ್ಕಿಳಿದೆ.  ಅಪ್ಪಂಗೇ ಹುಟ್ಟಿದ್ದೀಯಾ ಎಂಬ ಮಾಜಿ‌ MLA ಮಂಜುನಾಥಗೌಡ ಮಾತಿಗೆ ನಂಜೇಗೌಡ ಸುದ್ದಿಗೋಷ್ಠಿಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ‌ ಶಾಸಕ ಮಂಜುನಾಥಗೌಡನ 2ನೇ ಮುಖ ಅನಾವರಣಗೊಂಡಿದೆ. ಹೊಸಕೋಟೆ & ಕೋಡಿಹಳ್ಳಿ ಭಾಷೆ ಮಾಲೂರಿನ ಜನತೆಗೆ ಗೊತ್ತಾಗಿದೆ. ಮಾಲೂರಿಗೆ ಇತಿಹಾಸವಿದೆ, ಅನೇಕ ಮಹನೀಯರು ಆಡಳಿತ ಮಾಡಿದ್ದಾರೆ. ಮರು ಮತ ಎಣಿಕೆ ವಿಷಯಕ್ಕೆ ಕೆಲವರು ಸಂಭ್ರಮಾಚರಣೆ ಮಾಡಿದರು. ಅದಕ್ಕೆ ನಾನು ಹುಚ್ಚರೆಂಬ ಪದ ಬಳಕೆ ಮಾಡಿದೆ. ಅದಕ್ಕೆ ಮಂಜುನಾಥಗೌಡ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನನ್ನ ತಂದೆ ತಾಯಿ‌ ಬಗ್ಗೆ ಮಾತನಾಡಿದ್ದಾರೆ. ಅಪ್ಪ ಅಮ್ಮನಿಗೆ ಹುಟ್ಟಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಅಷ್ಟೇ ಅಲ್ಲ ನನ್ನ ಅಕ್ಕ, ತಂಗಿ, ಸಂಬಂಧಿಕರಿಗೂ ನೋವು ತಂದಿದೆ. ಅವರಿಗೆ (ಮಂಜುನಾಥಗೌಡ) ತಂದೆ, ತಾಯಿ, ಅಕ್ಕ, ತಂಗಿಯರು ಇಲ್ಲವಾ? ಎಂದು ಕಣ್ಣೀರಿಟ್ಟರು.