ಆನೇಕಲ್: ಮಹಾಶಿವರಾತ್ರಿಯ ಶುಭಸಂದರ್ಭದಲ್ಲಿ ಸರಳವಾಗಿ ಶುಭವಿವಾಹ ಮಾಡಿಕೊಂಡ ಅಸ್ಸಾಂ ಮೂಲದ ಯುವಕ-ಯುವತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2024 | 6:54 PM

ವರ ಮೊಹಂತಿಗೆ 23ರ ಪ್ರಾಯವಾದರೆ ವಧು ಪಾಂಪ್ರಿಗೆ ಈಗ 21. ಕೆಲಸ ಅರಸಿಕೊಂಡು ಅಸ್ಸಾಂನಿಂದ ಬೆಂಗಳೂರುಗೆ ಬಂದಿರುವ ನವವಿವಾಹಿತರು ಪ್ರೇಮಪಾಶದಲ್ಲಿ ಸಿಲುಕಿ ಇವತ್ತು ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಹಾರ ಬದಲಿಸಿಕೊಂಡ ಬಳಿಕ ಅವರು ಅರ್ಚಕರ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆಯುವ ದೃಶ್ಯ ಸುಂದರ ಮತ್ತು ಮನಸ್ಸಿಗೆ ಮುದ ನೀಡುವಂಥದ್ದು.

ಆನೇಕಲ್ (ಬೆಂಗಳೂರು): ಮದುವೆಗಳು (marriages) ಹೀಗೂ ನಡೆಯೋದುಂಟು ಮಾರಾಯ್ರೇ. ಮದುವೆ ಆಮಂತ್ರಣ ಪತ್ರ ಅಚ್ಚು ಹಾಕಿಸುವಾಗ ನಾವು ವಧು ವರನ ಶುಭವಿವಾಹ ಅಂತಲೇ ಹಾಕಿಸಿರುತ್ತೇವೆ. ನಗರದ ಹೊರವಲಯ ಆನೇಕಲ್ (Anekal) ತಾಲ್ಲೂಕಿನಲ್ಲಿರುವ ಪಂಚವಟಿ ಯೋಗಾಶ್ರಮದ ದೇವಾಲಯದಲ್ಲಿ ಮಹಾಶಿವರಾತ್ರಿಯಂದು ಇಂದು ನಡೆದ ಈ ಸರಳ ವಿವಾಹವು ನಿಜಕ್ಕೂ ಶುಭವಿವಾಹವೇ! ಅಂದಹಾಗೆ, ಕೆಲವೇ ಸಂಬಂಧಿಕರು ಮತ್ತು ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಮದುವೆಯಾದ ಅಸ್ಸಾಂನ ಚಂಜಿತ್ ಮೊಹಂತಿ (Chanjit Mohanty) ಮತ್ತು ಪಾಂಪಿ ಭೇಂಗ್ರಾ (Pompi Bhengra) ನೋಡಲು ಅಪ್ರಾಪ್ತರಂತೆ ಕಾಣುತ್ತಾರೆ. ಆದರೆ ವಧು ಮತ್ತು ವರ ಮಹಾಶಯ ಅಷ್ಟು ಚಿಕ್ಕವರೇನಲ್ಲ. ವರ ಮೊಹಂತಿಗೆ 23ರ ಪ್ರಾಯವಾದರೆ ವಧು ಪಾಂಪ್ರಿಗೆ ಈಗ 21. ಕೆಲಸ ಅರಸಿಕೊಂಡು ಅಸ್ಸಾಂನಿಂದ ಬೆಂಗಳೂರುಗೆ ಬಂದಿರುವ ನವವಿವಾಹಿತರು ಪ್ರೇಮಪಾಶದಲ್ಲಿ ಸಿಕ್ಕು ಇವತ್ತು ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಹಾರ ಬದಲಿಸಿಕೊಂಡ ಬಳಿಕ ಅವರು ಅರ್ಚಕರ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆಯುವ ದೃಶ್ಯ ಸುಂದರ ಮತ್ತು ಮನಸ್ಸಿಗೆ ಮುದ ನೀಡುವಂಥದ್ದು. ಯುವ ಜೋಡಿಗೆ ಶುಭವಾಗಲಿ, ಸತಿ-ಪತಿಯಾಗಿ ನೂರ್ಕಾಲ ಬಾಳಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Shivaratri Special Recipe : ಮಹಾಶಿವರಾತ್ರಿಗೆ ಸಬ್ಬಕ್ಕಿಯ ಈ ರೆಸಿಪಿಗಳನ್ನು ಮಿಸ್ ಮಾಡ್ಲೆಬೇಡಿ, ಇಲ್ಲಿದೆ ಸಿಂಪಲ್ ರೆಸಿಪಿ

Follow us on