‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ತಡವಾಗಿದ್ದೇಕೆ: ಸುನಿ ಕೊಟ್ಟರು ಉತ್ತರ
Avatara Purusha 2: ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ 2’ ಸಿನಿಮಾ ಮಾರ್ಚ್ 22ಕ್ಕೆ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇನ್ನೂ ಬೇಗನೆ ಬಿಡುಗಡೆ ಆಗಬೇಕಿತ್ತು. ಆದರೆ ತಡವಾಗಿದ್ದೇಕೆ ಎಂಬುದನ್ನು ಸಿಂಪಲ್ ಸುನಿ ವಿವರಿಸಿದ್ದಾರೆ.
ಸಿಂಪಲ್ ಸುನಿ (Simple Suni) ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಚಿತ್ರತಂಡ ಯಶಸ್ಸಿನ ಸಂಭ್ರಮವನ್ನೂ ಆಚರಿಸಿದೆ. ಇದೀಗ ಅವರದ್ದೇ ನಿರ್ದೇಶನದ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ‘ಅವತಾರ ಪುರುಷ 2’ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗಿಂತಲೂ ಮೊದಲೇ ಬಿಡುಗಡೆ ಆಗಬೇಕಿತ್ತು, ಆದರೆ ತಡವಾಗಿದೆ. ಸಿನಿಮಾದ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಳ್ಳಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಸಿನಿಮಾದ ಬಿಡುಗಡೆ ತಡವಾಗಿದ್ದೇಕೆ ಎಂಬುದನ್ನು ಅವರೇ ವಿವರಿಸಿದ್ದಾರೆ. ‘ಅವತಾರ ಪುರುಷ 2’ ಸಿನಿಮಾನಲ್ಲಿ ಶರಣ್ ನಾಯಕರಾಗಿ ನಟಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos