ದೊಡ್ಡಪ್ಪನ ಮಗನ 4-ವರ್ಷದ ಮಗನನ್ನು ಸಾಯಿಸಿದ ಹಂತಕ ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆಯಿದೆ

Updated on: Jul 22, 2025 | 6:00 PM

ಬೀಮಪ್ಪ ವಾಲೀಕಾರ ಮಾನಸಿಕ ಅಸ್ವಸ್ಥನೇ ಅಥವಾ ಯಾವುದಾದರೂ ಬೇಗುದಿಯನ್ನು ತನ್ನ ಮನಸ್ಸಿನಲ್ಲಿ ಪೋಷಿಸುತ್ತಿದ್ದನೇ ಎಂಬ ಅನುಮಾನ ಕಾಡದಿರದು. ದಾಯಾದಿಗಳಲ್ಲಿ ಜಗಳಗಳು ಹೊಸವೇನಲ್ಲ. ಅಂಗನವಾಡಿಗೆ ಹೋಗಿದ್ದ ಮಗುವನ್ನು ತನ್ನ ಮನೆಗೆ ಕರೆತಂದು ತನ್ನ ತಮ್ಮನ 5-ವರ್ಷದ ಮಗನ ಎದುರು ಭೀಮಪ್ಪ ವಾಲೀಕಾರ ಮಧುಕುಮಾರ್​ನನ್ನು ಕೊಂದಿದ್ದಾನೆ. ಕೊಲೆಯನ್ನು ಕಣ್ಣಾರೆ ನೋಡಿದ ಹುಡುಗನ ಸ್ಥಿತಿ ಏನಾಗಿರಬೇಡ?

ಬಾಗಲಕೋಟೆ, ಜುಲೈ 22: ಇದೆಂಥ ಹಗೆತನ, ದ್ವೇಷ ಮತ್ತು ಕ್ರೌರ್ಯ? ಅರ್ಥಮಾಡಿಕೊಳ್ಳುವುದು ನಿಜಕ್ಕೂ ಕಷ್ಟ. ಅಣ್ಣತಮ್ಮಂದಿರ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಕಲಹಗಳಿರುತ್ತವೆ (property dispute). ಜಗಳವಾಡುತ್ತಾರೆ, ಕೋರ್ಟ್ ಸುತ್ತುತ್ತಾರೆ ಮತ್ತು ಕೆಲ ಸಂದರ್ಭಗಳಲ್ಲಿ ಕೊಲೆಗಳು ನಡೆಯೋದುಂಟು. ಆದರೆ ಜಿಲ್ಲೆಯ ಹುನುಗುಂದ ತಾಲೂಕಿನ ಬೇಕನವಾಡಿ ಗ್ರಾಮದಲ್ಲಿ ಭೀಮಪ್ಪ ವಾಲೀಕಾರ ಎನ್ನುವ ವ್ಯಕ್ತಿ ತನ್ನ ದೊಡ್ಡಪ್ಪನ ಮಗ ಮಾರುತಿ ವಾಲೀಕಾರನ 4-ವರ್ಷದ ಮಗನನ್ನು ನಿಷ್ಕರುಣೆಯಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಹತ್ಯೆಯಾದ ಮಧುಕುಮಾರನ ತಾಯಿ ಹೇಳುವ ಪ್ರಕಾರ ಭೀಮಪ್ಪನೊಂದಿಗೆ ಇವರ ಕುಟಂಬಕ್ಕೆ ಯಾವುದೇ ಕಲಹವಿರಲಿಲ್ಲ.

ಇದನ್ನೂ ಓದಿ: ಮುಂಬೈ: ಪ್ರೇಮಿ ಜತೆ ಸೇರಿ ಗಂಡನ ಕೊಲೆ ಮಾಡಿ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಪತ್ನಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ