ತಂದೆ ಮೇಲಿನ ಸೇಡಿಗೆ ರ್ಯಾಂಕ್ ಸ್ಟುಡೆಂಟ್ ಮಗಳನ್ನೇ ಕಿಡ್ನಾಪ್ ಮಾಡಿ ಕೊಂದ
ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 11 ರಂದು ಭಾಗ್ಯಶ್ರೀ (21) ಎಂಬ ಯುವತಿ ಕಾಣೆಯಾಗಿದ್ದು, ನಾಪತ್ತೆಯಾಗಿ 7 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮಳಖೇಡ ಗ್ರಾಮದ ಸುಲಹಳ್ಳಿ ನಿವಾಸಿಯಾಗಿದ್ದ ಭಾಗ್ಯಶ್ರೀ ಪ್ರಕರಣಕ್ಕೆ ಸಂಬಂಧಿಸಿ, ಮಂಜುನಾಥ್ ಎಂಬ ಶಂಕಿತ ಆರೋಪಿಯನ್ನ ಬಂಧಿಸಲಾಗಿದೆ. ತಂದೆ ಮೇಲಿನ ಸೇಡಿಗಾಗಿ ಭಾಗ್ಯಶ್ರೀಯನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಲಬುರಗಿ, (ಸೆಪ್ಟೆಂಬರ್ 19): ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 11 ರಂದು ಭಾಗ್ಯಶ್ರೀ (21) ಎಂಬ ಯುವತಿ ಕಾಣೆಯಾಗಿದ್ದು, ನಾಪತ್ತೆಯಾಗಿ 7 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮಳಖೇಡ ಗ್ರಾಮದ ಸುಲಹಳ್ಳಿ ನಿವಾಸಿಯಾಗಿದ್ದ ಭಾಗ್ಯಶ್ರೀ ಪ್ರಕರಣಕ್ಕೆ ಸಂಬಂಧಿಸಿ, ಮಂಜುನಾಥ್ ಎಂಬ ಶಂಕಿತ ಆರೋಪಿಯನ್ನ ಬಂಧಿಸಲಾಗಿದೆ. ತಂದೆ ಮೇಲಿನ ಸೇಡಿಗಾಗಿ ಭಾಗ್ಯಶ್ರೀಯನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಮಂಜುನಾಥ್ ಸಹೋದರ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಹೋದರ ದುಡುಕಿನ ನಿರ್ಧಾರಕ್ಕೆ ಭಾಗ್ಯಶ್ರೀ ಅಪ್ಪ ಕಾರಣ ಎಂಬ ಆರೋಪ ಇದೆ. ಆರೋಪಿಯ ಸಹೋದರ ವಿನೋದ್ ಮಳಖೇಡ ಗ್ರಾಮದ ಅಲ್ಟ್ರಾಟೇಕ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಖಾಯಂ ಉದ್ಯೋಗದ ಆಕಾಂಕ್ಷಿ ಆಗಿದ್ದ. ಆದರೆ ಈತನಿಗೆ ಖಾಯಂ ಉದ್ಯೋಗ ಸಿಗದಿರಲು ಭಾಗ್ಯಶ್ರೀ ತಂದೆ ಚೆನ್ನವೀರಪ್ಪ ಕಾರಣ ಎಂದು ಆರೋಪಿಸಲಾಗಿದೆ. ವಿನೋದ್ ಉದ್ಯೋಗ ಖಾಯಂ ಆಗದ ಹಿನ್ನೆಲೆಯಲ್ಲಿ ಮನನೊಂದು ಜೀವ ತೆಗೆದುಕೊಂಡಿದ್ದ. ಸಹೋದರ ನಿಧನದಿಂದ ರೊಚ್ಚಿಗೆದ್ದಿದ್ದ ಮಂಜುನಾಥ್ ಸೇಡು ತೀರಿಸಿಕೊಳ್ಳೋದಾಗಿ ವಾರ್ನ್ ಮಾಡಿದ್ದ ಎನ್ನಲಾಗಿದೆ. ಅಂತೆಯೇ ಸೆಪ್ಟೆಂಬರ್ 11 ರಂದು ಚೆನ್ನವೀರಪ್ಪ ಪುತ್ರಿಯರು ವಾಕಿಂಗ್ ತೇರಳಿದ್ದ ವೇಳೆ ಅಲ್ಲಿಗೆ ಮಂಜುನಾಥ್ ಎಂಟ್ರಿ ಕೊಟ್ಟಿದ್ದ. ಹಾಗಾಗಿ ಮಂಜುನಾಥನೇ ಭಾಗ್ಯಶ್ರೀಯನ್ನ ಕಿಡ್ನಾಪ್ ಮಾಡಿ ಕೃತ್ಯ ನಡೆಸಿದ್ದಾನೆ ಎಂಬ ಶಂಕೆ ಇದೆ. ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
