Loading video

Bengaluru Stampede; ಪ್ರಥಮ ಚಿಕಿತ್ಸೆ ಗೊತ್ತಿರುವ ವ್ಯಕ್ತಿ ಜನರನ್ನು ಉಳಿಸುವ ಪ್ರಯತ್ನದಲ್ಲಿದ್ದರೆ ಪೊಲೀಸರಿಂದ ಅಡ್ಡಿ?

Updated on: Jun 04, 2025 | 9:31 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಕಾರ ಸ್ಟಾಂಪೀಡ್​​ನಲ್ಲಿ 11 ಜನ ಮೃತಪಟ್ಟು 33 ಜನ ಗಾಯಗೊಂಡಿದ್ದಾರೆ. ಒಬ್ಬ ಮಹಿಳೆಗೆ ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿರುವ ವಿಚಾರ ಗೊತ್ತೇ ಇರಲಿಲ್ಲ ಎಂದು ಮಹೇಶ್ ಹೇಳುತ್ತಾರೆ. ಅವರು ಸಾಲಲ್ಲಿ ಕೊಂಚ ದೂರ ಇದ್ದರಂತೆ ಮಗಳು ಮುಂದೆ ಬಂದಿದ್ದಾಳೆ. ಜನರ ಚೀರಾಟ ನೂಕಾಟ ಕೇಳಿ ಮುಂದೆ ಬಂದು ನೋಡಿದಾಗ ತಮ್ಮ ಮಗು ಸತ್ತು ಬಿದ್ದಿರುವುದು ಕಂಡಿದೆ. ಆ ಸನ್ನಿವೇಶ ನೋಡಲು ಸಾಧ್ಯವಿರಲಿಲ್ಲ ಎಂದು ಮಹೇಶ್ ಹೇಳುತ್ತಾರೆ.

ಬೆಂಗಳೂರು, ಜೂನ್ 4: ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ಸಂಖ್ಯೆ 17 ಮುಂದೆ ಈಗಲೂ ಕಾಣುವ ದೃಶ್ಯ ಭಯಾನಕ. ಕಾಲ್ತುಳಿತದ ಘಟನೆ ನಡೆದಿದ್ದು ಇದೇ ಸ್ಥಳದಲ್ಲಿ. ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಮಹೇಶ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಕಣ್ಣೆದುರೇ ಮೂರು ಜನ ಸಾಯುವುದನ್ನು ನೋಡಿದ್ದಾರೆ. ಇವರು ಪ್ಯಾರಾ ಮೆಡಿಕಲ್ ವರ್ಕರ್ ಅಥವಾ ಮತ್ತೇನು ಅಂತ ಗೊತ್ತಿಲ್ಲ, ಅದರೆ ವ್ಯಕ್ತಿಯೊಬ್ಬ ಮೂರ್ಛೆ ಹೋದಾಗ, ಹೃದಯಾಘಾತಕ್ಕೊಳಗಾದಾಗ ಇಲ್ಲವೇ ಕಾಲ್ತುಳಿತ ನಡೆದು ನೆಲಕ್ಕೆ ಬಿದ್ದ ವ್ಯಕ್ತಿ ಉಸಿರಾಟದ ತೊಂದರೆಗೆ ಒಳಗಾಗಿದ್ದರೆ ಕೂಡಲೇ ಏನು ಪ್ರಥಮ ಚಿಕಿತ್ಸೆ ನೀಡಬೇಕೆಂದು ಗೊತ್ತಿದೆ. ಇವರು ಜನರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾಗ, ಪೊಲೀಸರು ನೀವೇನು ಡಾಕ್ಟ್ರಾ ಅಂತ ಹೇಳಿ ತುಳಿತಕ್ಕೆ ಒಳಗಾದವರನ್ನು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಕಾಲ್ತುಳಿತದ ಘಟನೆ ನೋಡುವುದು ಸಾಧ್ಯವಿರಲಿಲ್ಲ, ಬಹಳ ಭಯಾನಕವಾಗಿತ್ತು ಎಂದು ಮಹೇಶ್ ಹೇಳುತ್ತಾರೆ

ಇದನ್ನೂ ಓದಿ: ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ದುರ್ಘಟನೆ ಬಗ್ಗೆ ರಮ್ಯಾ, ಸಪ್ತಮಿ ಪ್ರತಿಕ್ರಿಯೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 04, 2025 09:21 PM