IND vs AFG: ಕೇವಲ ನಾಲ್ಕು ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಮಾನವ್

Updated on: Jun 07, 2026 | 4:24 PM

Manav Suthar's Dream Debut: ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಪಾದಾರ್ಪಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯುವ ಆಲ್‌ರೌಂಡರ್ ಸುತಾರ್ ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿ, ತಂಡವನ್ನು 500 ರನ್ ಗಡಿ ದಾಟಿಸಲು ನೆರವಾದರು. ಬೌಲಿಂಗ್‌ನಲ್ಲಿ, ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿಸಿ ಗಮನ ಸೆಳೆದರು. ಈ ಮೂಲಕ ಅವರು ಟೀಂ ಇಂಡಿಯಾಗೆ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅವರ ಆಲ್‌ರೌಂಡ್ ಆಟ ತಂಡಕ್ಕೆ ಮಹತ್ವದ ಕೊಡುಗೆ ನೀಡಿದೆ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಯುವ ಆಲ್‌ರೌಂಡರ್ ಮಾನವ್ ಸುತಾರ್ ಚೊಚ್ಚಲ ಪಂದ್ಯದಲ್ಲಿತೇ ತಮ್ಮ ಛಾಪು ಮೂಡಿಸಿದ್ದಾರೆ. ಮೊದಲು ಬ್ಯಾಟಿಂಗ್​ನಲ್ಲಿ 28 ರನ್​ಗಳ ಇನ್ನಿಂಗ್ಸ್ ಆಡಿದ ಸುತಾರ್, ವಾಷಿಂಗ್ಟನ್ ಸುಂದರ್ ಅವರೊಂದಿಗೆ 54 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು 500 ರನ್​ಗಳ ಗಡಿ ದಾಟಿಸಿದರು. ಸುತಾರ್ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

ಬ್ಯಾಟಿಂಗ್‌ ಬಳಿಕ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ ಸುತಾರ್, ತಾನು ಬೌಲ್ ಮಾಡಿದ ಮೊದಲ ಓವರ್​ನಲ್ಲಿಯೇ ವಿಕೆಟ್ ಉರುಳಿಸಿದರು. ಸುತಾರ್ ಬೌಲ್ ಮಾಡಿದ 6ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ಹೀಗಾಗಿ ಸ್ಟ್ರೈಕ್​ನಲ್ಲಿದ್ದ ಅಫ್ಘನ್ ಆರಂಭಿಕ ಅಬ್ದುಲ್ ಮಲಿಕ್ ಸ್ಲಾಗ್ ಸ್ವೀಪ್ ಆಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟ್​​ನ ಅಂಚಿಗೆ ಬಡಿದು ನಂತರ ಅವರ ಹೆಲ್ಮೆಟ್​ಗೆ ತಾಗಿ ಮೇಲಕ್ಕೆ ಹೋಯಿತು. ಇತ್ತ ಸಿರಾಜ್ ಕ್ಯಾಚ್ ತೆಗೆದುಕೊಳ್ಳುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಈ ಮೂಲಕ ಸುತಾರ್ ತಮ್ಮ ವೃತ್ತಿಜೀವನದ ಮೊದಲ ವಿಕೆಟ್ ಅನ್ನು ಮೊದಲ ಓವರ್​ನಲ್ಲಿಯೇ ಪಡೆದರು.

Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More