ಅಮಿತ್ ಶಾ ಹೇಳಿಕೆ ವಿರುದ್ಧ ವಿವಿಧ ಸಂಘಟನೆಗಳಿಂದ ಮಂಡ್ಯ ಬಂದ್ಗೆ ಕರೆಗೆ ಜನರ ನೀರಸ ಪ್ರತಿಕ್ರಿಯೆ
ಪ್ರತಿಭಟನೆಯ ಭಾಗವಾಗಿ ಬಂದ್ ಮಾಡಿಸುವುದು ಕ್ಲೀಷೆ ಅನಿಸುತ್ತಿದೆ. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ ಅದು ಬೇರೆ ವಿಷಯ. ಅದರೆ ಪ್ರತಿಭಟನೆ ಮಾಡಲಿಚ್ಛಿಸುವವರು ಬಂದ್ಗೆ ಹೊರತಾಗಿ ಬೇರೆ ರೀತಿಯಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಧರಣಿ ನಡೆಸುವ ಮಾರ್ಗಗಳನ್ನು ಹುಡುಕಬೇಕು.
ಮಂಡ್ಯ: ಸಂವಿಧಾನ ಶಿಲ್ಪಿ ಡಾ ಬಿಅರ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಇವತ್ತು ಮೈಸೂರು ಮತ್ತು ಮಂಡ್ಯ ಬಂದ್ ಗೆ ಕರೆ ನೀಡಿದ್ದಾರೆ. ಮಂಡ್ಯದಲ್ಲಿ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲವೆಂದರೆ ಉತ್ಪ್ರೇಕ್ಷೆ ಅನಿಸದು. ಶಾಲಾ ಕಾಲೇಜುಗಳು ಓಪನ್ ಆಗಿವೆ, ರಸ್ತೆಗಳಲ್ಲಿ ಬಸ್ ಮತ್ತು ಅಟೋ ಸಂಚಾರ ಎಂದಿನಂತೆ ನಡೆಯುತ್ತಿದೆ, ಪೆಟ್ರೋಲ್ ಬಂಕ್ ಮತ್ತು ಆಸ್ಪತ್ರೆಗಳ ಮುಂದೆ ಜನರನ್ನು ಕಾಣಬಹುದು, ಬಸ್ ನಿಲ್ದಾಣದಲ್ಲಿ ಜನ ನೆರೆದಿದ್ದಾರೆ. ಕೆಲವು ಕಡೆ ಪ್ರತಿಭಟನೆಕಾರರು ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವುದು ಕಂಡು ಬಂತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಖಂಡಿಸಿ ಮೈಸೂರು, ಮಂಡ್ಯ ಬಂದ್: ಹೇಗಿದೆ ಪರಿಸ್ಥಿತಿ?