ಮಂಡ್ಯ: ಗಿಳಿ ಶಾಸ್ತ್ರ ಕೇಳಿ ಸಿಎಂ, ಡಿಸಿಎಂ ವಿರುದ್ಧ ಬಿಜೆಪಿ ವ್ಯಂಗ್ಯ

Edited By:

Updated on: Nov 23, 2025 | 11:21 AM

ಗಿಳಿ ಶಾಸ್ತ್ರ ಕೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ನಡುವಿನ ಸಿಎಂ ಕುರ್ಚಿ ಫೈಟ್​​ ಬಗ್ಗೆ ಮಂಡ್ಯ ಬಿಜೆಪಿ ವ್ಯಂಗ್ಯವಾಡಿದೆ. ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿಗರು ಗಿಳಿ ಶಾಸ್ತ್ರ ಕೇಳಲಿ ಎಂಬ ಡಿಕೆಶಿ ಹೇಳಿಕೆಗೆ ಕೌಂಟರ್​​ ಕೊಟ್ಟಿರುವ ಬಿಜೆಪಿ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ?, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಗಿಳಿ ಶಾಸ್ತ್ರ ಕೇಳಿದ್ದಾರೆ.

ಮಂಡ್ಯ, ನವೆಂಬರ್​​ 23: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಫೈಟ್ ವಿಚಾರ ಸಂಬಂಧ ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಲಿ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್​​ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕವೇ ವ್ಯಂಗ್ಯವಾಡಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಎಂದು ಬಿಜೆಪಿಗರು ಗಿಳಿ ಶಾಸ್ತ್ರ ಕೇಳಿದ್ದು,ಈ ವೇಳೆ ಗಿಳಿ ಚಂಬು ಇರುವ ಕಾರ್ಡ್ ತೆಗೆದಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚಂಬು ಎಂದು ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದ್ದು, ಈ ವೇಳೆ ಗಿಳಿ ಹೂ ಇರುವ ಕಾರ್ಡ್​​ ತೆಗೆದಿದೆ.  ಹೀಗಾಗಿ ಬಿಜೆಪಿಗರು ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಎಂದು ವಿಡಂಬನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 23, 2025 11:18 AM