AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಹೈವೇಗೆ ಉರುಳಿ ಬಿದ್ದ ಬಾಯ್ಲರ್ ಟ್ಯಾಂಕ್, ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್

ಮಂಡ್ಯ: ಹೈವೇಗೆ ಉರುಳಿ ಬಿದ್ದ ಬಾಯ್ಲರ್ ಟ್ಯಾಂಕ್, ಮೈಸೂರು – ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್

ದಿಲೀಪ್​, ಚೌಡಹಳ್ಳಿ
| Edited By: |

Updated on: Jul 27, 2026 | 10:56 AM

Share

ಮಂಡ್ಯದ ಮುರುಕನಹಳ್ಳಿ ಸಮೀಪ ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಯಲ್ಲಿ ಬೃಹತ್ ಬಾಯ್ಲರ್ ಟ್ಯಾಂಕ್ ಉರುಳಿ ಬಿದ್ದಿದೆ. ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಸಾಗುತ್ತಿದ್ದ ಲಾರಿ ಮರಕ್ಕೆ ತಗುಲಿ ಈ ಘಟನೆ ಸಂಭವಿಸಿದೆ. ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಟ್ಯಾಂಕ್ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಮಂಡ್ಯ, ಜುಲೈ 27: ಮಂಡ್ಯ ಜಿಲ್ಲೆಯ ಮುರುಕನಹಳ್ಳಿ ಸಮೀಪ ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಯಲ್ಲಿ ಬೃಹತ್ ಬಾಯ್ಲರ್ ಟ್ಯಾಂಕ್ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಸಾಗಿಸಲಾಗುತ್ತಿದ್ದ ಈ ಬಾಯ್ಲರ್ ಟ್ಯಾಂಕ್ ಹೊತ್ತ ಲಾರಿಯು ಮರಕ್ಕೆ ತಗುಲಿ ರಸ್ತೆಗೆ ಉರುಳಿಬಿದ್ದಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಹೆದ್ದಾರಿಯು ಸಂಪೂರ್ಣವಾಗಿ ಬಂದ್ ಆಗಿದ್ದು, ಸ್ಥಳದಲ್ಲಿ ವಾಹನಗಳ ದೊಡ್ಡ ಸರತಿ ಸಾಲು ಉಂಟಾಗಿದೆ.

ಘಟನೆಯ ನಂತರ ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಸ್ತೆಯ ಮಧ್ಯೆ ನಡುರಸ್ತೆಯಲ್ಲೇ ಉರುಳಿಬಿದ್ದಿರುವ ಬಾಯ್ಲರ್ ಟ್ಯಾಂಕ್ ಅನ್ನು ತೆರವುಗೊಳಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯಕ್ಕೆ, ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಡ್ಯ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಬೃಹತ್ ಟ್ಯಾಂಕ್ ತೆರವುಗೊಳಿಸಲು ವಿಶೇಷ ಉಪಕರಣಗಳ ಅಗತ್ಯವಿದ್ದು, ಕಾರ್ಯಾಚರಣೆ ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಟ್ಯಾಂಕ್ ಸಂಪೂರ್ಣವಾಗಿ ತೆರವುಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗುವ ನಿರೀಕ್ಷೆಯಿದ್ದು, ರಸ್ತೆ ಸುಗಮ ಸಂಚಾರಕ್ಕಾಗಿ ಪ್ರಯತ್ನಗಳು ಮುಂದುವರಿದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us