Child Marriage: ರಾಜ್ಯದಲ್ಲಿ ಅತಿಹೆಚ್ಚು ಪ್ರಕರಣಗಳು ಮಂಡ್ಯ ಜಿಲ್ಲೆಯಿಂದ ವರದಿಯಾಗುತ್ತಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 20, 2023 | 12:05 PM

ಮಂಡ್ಯದಲ್ಲಿ 2021-22 ಸಾಲಿನಲ್ಲಿ 190 ಬಾಲ್ಯವಿವಾಹದ ಪ್ರಕರಣಗಳು, 2020-21 ಸಾಲಿನಲ್ಲಿ 245 ಮತ್ತು 2022-23 ಸಾಲಿನಲ್ಲಿ 104 ಪ್ರಕರಣಗಳು ದಾಖಲಾಗಿವೆ.

ಮಂಡ್ಯ: ಬಾಲ್ಯವಿವಾಹ (child marriage) ನಿಸ್ಸಂದೇಹವಾಗಿ ಒಂದು ಸಾಮಾಜಿಕ ಪಿಡುಗು (social evil). ಸೋಜಿಗದ ಸಂಗತಿಯೆಂದರೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೂ ಬಾಲ್ಯವಿವಾಹದ ಸಾವಿರಾರು ಪ್ರಕರಣಗಳು ದೇಶದೆಲ್ಲೆಡೆ ಸಂಭವಿಸುತ್ತಿವೆ. ನಮ್ಮ ರಾಜ್ಯ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಸಕ್ಕರೆ ನಾಡು ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದ ಅತಿಹೆಚ್ಚು ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯ ಮಹಿಳೆ ಮತ್ತು ಮಕ್ಕಳ ವಿಕಸನ ಸಹಾಯವಾಣಿ ನಿರ್ದೇಶಕರಾಗಿರುವ ಮಹೇಶ್ ಚಂದ್ರ ಗುರು (Mahesh Chandra Guru) ಅವರು ನೀಡಿರುವ ಮಾಹಿತಿಯ ಪ್ರಕಾರ ಮಂಡ್ಯದಲ್ಲಿ 2021-22 ಸಾಲಿನಲ್ಲಿ 190 ಬಾಲ್ಯವಿವಾಹದ ಪ್ರಕರಣಗಳು, 2020-21 ಸಾಲಿನಲ್ಲಿ 245 ಮತ್ತು 2022-23 ಸಾಲಿನಲ್ಲಿ 104 ಪ್ರಕರಣಗಳು ದಾಖಲಾಗಿವೆ. ಕೆ ಆರ್ ಪೇಟೆ, ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಿಂದ ಅತಿಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ಮಹೇಶ್ ಚಂದ್ರ ಗುರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ