‘ದುನಿಯಾ’ ವಿಜಯ್ (Duniya Vijay) ನಿರ್ದೇಶನದ ಎರಡನೇ ಸಿನಿಮಾ ‘ಭೀಮ’ ಚಿತ್ರ (Bheema Movie) ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಫಸ್ಟ್ ಪೋಸ್ಟರ್ ಟೀಸರ್ ಇಂದು (ಜನವರಿ 20) ರಿಲೀಸ್ ಆಗಿದೆ. ದುನಿಯಾ ವಿಜಯ್ ಅವರ ಬರ್ತ್ಡೇ ಪ್ರಯುಕ್ತ ಈ ಟೀಸರ್ ತೆರೆಕಂಡಿದೆ. ಈ ಚಿತ್ರದ ಶೇ.60 ಶೂಟಿಂಗ್ ಪೂರ್ಣಗೊಂಡಿದೆ ಎಂದು ನಿರ್ಮಾಪಕ ಜಗದೀಶ್ ಹೇಳಿದ್ದಾರೆ. ಜತೆಗೆ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ ಎಂದು ಭರವಸೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ