PM Narendra Modi Karnataka Visit: ಯಾದಗಿರಿಯ ಕೊಡೇಕಲ್ ನಲ್ಲಿ ಪ್ರಧಾನಿ ತಮ್ಮ ಭಾಷಣವನ್ನು ಕನ್ನಡ ಭಾಷೆಯಲ್ಲೇ ಆರಂಭಿಸಿದರು!
ಯಾದಗಿರಿಯ ಕೊಡೇಕಲ್ ಗ್ರಾಮದಲ್ಲಿ ಇಂದು ನಡೆದ ಬೃಹತ್ ಸಮಾರಂಭದಲ್ಲಿಯೂ ಅವರು, ‘ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು,’ ಎಂದು ಭಾಷಣ ಆರಂಭಿಸುತ್ತಾರೆ.
ಯಾದಗಿರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕನ್ನಡ ಭಾಷೆಯಲ್ಲಿ ಮಾತಾಡಿದ್ದು ಇದು ಮೊದಲ ಸಲವೇನಲ್ಲ. ಹಿಂದೆ ಚುನಾವಣಾ ಪ್ರಚಾರಕ್ಕಾಗಿ (electioneering) ರಾಜ್ಯಕ್ಕೆ ಆಗಮಿಸಿದಾಗೆಲ್ಲ ಅವರು ತಮ್ಮ ಭಾಷಣವನ್ನು ಕನ್ನಡ ಭಾಷೆಯಲ್ಲೇ (Kannada language) ಆರಂಭಿಸಿದ್ದಾರೆ. ಯಾದಗಿರಿಯ ಕೊಡೇಕಲ್ ಗ್ರಾಮದಲ್ಲಿ ಇಂದು ನಡೆದ ಬೃಹತ್ ಸಮಾರಂಭದಲ್ಲಿಯೂ ಅವರು, ‘ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು,’ ಎಂದು ಭಾಷಣ ಆರಂಭಿಸುತ್ತಾರೆ. ನಂತರ ಹಿಂದಿ ಭಾಷೆಯಲ್ಲಿ ಸ್ಫುಟವಾಗಿ ಮಾತು ಮುಂದುವರಿಸುವ ಅವರು ಯಾದಗಿರಿಯ ಐತಿಹಾಸಿಕ ಹಿನ್ನೆಲೆ ಮತ್ತು ಸುರುಪುರ ಸಂಸ್ಥಾನದ ದೊರೆ ರಾಜಾ ವೆಂಕಟಪ್ಪ ನಾಯಕ್ ಅವರು ಪ್ರಾಂತ್ಯಕ್ಕೆ ನೀಡಿದ ಕಾಣಿಕೆಯನ್ನು ಸ್ಮರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos