ಮಂಡ್ಯದಲ್ಲಿ ಚೇಸ್ ಮಾಡಿ ಗೋ ಹಂತಕರನ್ನು ಬಂಧಿಸಿದ ಪೊಲೀಸರು! ವಿಡಿಯೋ ಇಲ್ಲಿದೆ
ಆರೋಪಿ ಸೈಮನ್ ಕಸಾಯಿಖಾನೆಯಲ್ಲಿ ಎರಡು ಜೋಡೆತ್ತುಗಳನ್ನು ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಗೋಮಾಂಸ (Beef) ಮಾರಾಟ ಅಂಗಡಿ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಪಾಂಡವಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆ ಎದುರೆ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿತ್ತು. ಆರೋಪಿ ಸೈಮನ್ ಕಸಾಯಿಖಾನೆಯಲ್ಲಿ ಎರಡು ಜೋಡೆತ್ತುಗಳನ್ನು ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಕೂದಲಿನ ಆರೈಕೆ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ
ಅಸ್ಸಾಂನಲ್ಲಿ ಹೆಚ್ಚುತ್ತಿದೆ ಮಾನವ- ವನ್ಯಜೀವಿ ಸಂಘರ್ಷ; ಫೋಟೋ ತೆಗೆಯಲು ಮುಂದಾದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಚಿರತೆ