ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಹುಷಾರ್ ಅಂತ ರೌಡಿಗಳನ್ನು ಎಚ್ಚರಿಸಿದರು ಮಂಡ್ಯದ ಎಸ್ ಪಿ ಯತೀಶ್
ಎಸ್ ಪಿ ಅವರು ರಾತ್ರೋರಾತ್ರಿ ತಮ್ಮ ಪಡೆಯೊಂದಿಗೆ ಅವರ ಮನೆಗಳ ಮೇಲೆ ದಾಳಿ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಎಚ್ಚರಿಸಿದ್ದಾರೆ.
ಮಂಡ್ಯ ಜಿಲ್ಲೆಯ ರೌಡಿಗಳಿಗೆ ಭಯ ಶುರುವಿಟ್ಟುಕೊಂಡಿದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ (N Yatish) ಖಡಕ್ ಅಂತ ಗೊತ್ತಾಗಿ ಅವರು ಕೂತಲ್ಲೇ ಬೆವರುತಿದ್ದಾರೆ. ದೊಡ್ಡಮಟ್ಟದ ರೌಡಿಗಳು (rowdies) ಬಾಲಮುದುರಿಕೊಂಡು ಕೂತಿದ್ದರೆ ಮಂಡ್ಯ ನಗರದ (Mandya city) ಕೆಲ ಪುಡಿರೌಡಿಗಳು ಬಾಲ ಬಿಚ್ಚಲಾರಂಭಿಸಿದ್ದು ಗೊತ್ತಾದ ಕೂಡಲೇ ಎಸ್ ಪಿ ಅವರು ರಾತ್ರೋರಾತ್ರಿ ತಮ್ಮ ಪಡೆಯೊಂದಿಗೆ ಅವರ ಮನೆಗಳ ಮೇಲೆ ದಾಳಿ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಆಂತ ಎಚ್ಚರಿಸಿದ್ದಾರೆ. ಇಲ್ಲಿರುವ ರೌಡಿಯ ಮನೆ ನೋಡಿ ಎಸ್ ಪಿ ಯತೀಶ್ ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: Viral Video: ಈ ಶ್ವಾನಕ್ಕೆ ಮನೆಯಲ್ಲಿ ಸ್ನಾನ ಮಾಡುವುದೆಂದರೆ ಬಹಳ ದುಃಖ, ಆದರೆ…