ಮಂಗಳೂರು: ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್

Edited By:

Updated on: Oct 12, 2024 | 1:49 PM

ನಟ ದರ್ಶನ್ ಹಾಗೂ ಗ್ಯಾಂಗ್​ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಈಗ ನವರಾತ್ರಿ ವೇಷದ ಥೀಮ್! ರೇಣುಕಾಸ್ವಾಮಿಯ ಪ್ರೇತಾತ್ಮ ಎಂಬಂತೆ ಬಿಂಬಿತವಾದ ನವರಾತ್ರಿ ವೇಷವೊಂದು ಕರಾವಳಿ ಕರ್ನಾಟಕದ ಮಂಗಳೂರು ಸುತ್ತಮುತ್ತ ಮನೆ ಮನೆ ಸಂಚರಿಸಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.

ಮಂಗಳೂರು, ಅಕ್ಟೋಬರ್ 12: ನವರಾತ್ರಿ ವೇಷದ ರೂಪದಲ್ಲಿ ರೇಣುಕಾಸ್ವಾಮಿ ಪ್ರೇತಾತ್ಮ ಬಂದಿರುವುದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಮನ ಜೊತೆ ಭೂಲೋಕಕ್ಕೆ ಬಂದ ಪ್ರೇತಾತ್ಮ, ಭೂಲೋಕದಲ್ಲಿ ತನಗೆ ಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಂತೆ ಚಿತ್ರಣ ಮಾಡಲಾಗಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ನವರಾತ್ರಿ ಸಂದರ್ಭ ವಿವಿಧ ವೇಷ ಹಾಕಿ ವೇಷಧಾರಿಗಳು ಮನೋರಂಜನೆ ನೀಡುತ್ತಾರೆ. ಈ ಬಾರಿ ವ್ಯಕ್ತಿಗಳಿಬ್ಬರು ರೇಣುಕಾಸ್ವಾಮಿ ಪ್ರೇತಾತ್ಮ ಹಾಗೂ ಯಮನ ವೇಷ ಧಾರಣೆ ಮಾಡಿ ಬಂದಿದ್ದಾರೆ.

ಅಂದಹಾಗೆ, ವಿಡಿಯೋದಲ್ಲಿರುವ ಧ್ವನಿ ತುಳು ಭಾಷೆಯಲ್ಲಿದೆ. ಚಿತ್ರಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಿದ್ದೇವೆ ಎಂಬ ಅರ್ಥ ಬರುವಂತೆ ತುಳು ಭಾಷೆಯಲ್ಲಿ ವೇಷಧಾರಿಗಳು ಮಾತನಾಡಿಕೊಂಡಿದ್ದಾರೆ. ಹೊಸ ಪರಿಕಲ್ಪನೆಯ ನವರಾತ್ರಿ ವೇಷದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More