ಜಯಂತ್ ಮನೆಯಲ್ಲಿ ಗಾಂಜಾ ಮಾರುತ್ತಾರೆಂದು ನೆರೆಮನೆಯಲ್ಲಿದ್ದ ಮಹಿಳೆಯಿಂದ ನೇರ ಅರೋಪ 

Updated on: Aug 30, 2025 | 6:24 PM

ಮಹಾಲಕ್ಷ್ಮಿ ಹೇಳೋದು ನಿಜವಾದರೆ ಪೊಲೀಸರ ನಿಷ್ಕ್ರಿಯತೆ ಮತ್ತು ಉಡಾಫೆ ಗಾಬರಿ ಹುಟ್ಟಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯವನ್ನು ಮುಖ್ಯವಾಗಿ ಬೆಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ಪಣತೊಟ್ಟಿದ್ದಾರೆ, ಆದರೆ ನಗರದಲ್ಲಿ ಡ್ರಗ್ಸ್ ಮುಕ್ತವಾಗಿ ಸಿಗುತ್ತಿವೆ. ಈ ಮಹಿಳೆ ಅದರ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಅದನ್ನು ನಿರ್ಲಕ್ಷಿಸುತ್ತಾರೆ ಅಂದರೆ ಏನರ್ಥ? ಅವರು ಯಾಕೆ ರೇಡ್ ಮಾಡಲಿಲ್ಲ?

ಬೆಂಗಳೂರು, ಆಗಸ್ಟ್ 30: ನಗರದ ಪೀಣ್ಯ ಭಾಗದಲ್ಲಿರುವ ಜಯಂತ್ ಮನೆಗೆ ಸಿಎನ್ ಚಿನ್ನಯ್ಯ (CN Chinnaiah) ಬಂದುಹೋಗುದನ್ನು ತಾನು ನೋಡಿದ್ದಾಗಿ ಅವರ ನೆರೆಹೊರೆಯವರಾಗಿದ್ದ ಮಹಿಳೆಯೊಬ್ಬರು ನಮ್ಮ ವರದಿಗಾರನಿಗೆ ಹೇಳುತ್ತಾರೆ. ಮಹಾಲಕ್ಷ್ಮಿ ಹೆಸರಿನ ಮಹಿಳೆ ಸುಮಾರು 5 ವರ್ಷಗಳ ಕಾಲ ಜಯಂತ್ ಮನೆ ಪಕ್ಕ ವಾಸವಾಗಿದ್ದರು ಮತ್ತು ಈಗ್ಗೆ 5 ತಿಂಗಳು ಹಿಂದೆ ಮನೆಖಾಲಿ ಮಾಡಿ ಬೇರೆಡೆ ವಾಸಿಸುತ್ತಿದ್ದಾರಂತೆ. ಮಹಾಲಕ್ಷ್ಮಿಯವರು ಜಯಂತ್ ಮತ್ತು ಇಂದು ಅನ್ನುವವರ ಮೇಲೆ ಗುರುತರವಾದ ಆರೋಪ ಮಾಡುತ್ತಾರೆ. ಇಬ್ಬರ ಮನೆಯಿಂದಲೂ ಗಾಂಜಾ ಮಾರಾಟವಾಗುತ್ತದಂತೆ ಮತ್ತು ಅದನ್ನವರು ಮನೆ ಮಾಲೀಕನ ಗಮನಕ್ಕೆ ತಂದು ಪೊಲೀಸರಿಗೂ ಮಾಹಿತಿ ನೀಡಿದ್ದರಂತೆ. ಜಯಂತ್ ಜೊತೆ ಯಾವುದೇ ತಕರಾರು ಇರಲಿಲ್ಲ, ಆದರೆ ಗಾಂಜಾ ಮಾರಾಟ ಮಾಡುವ ಬಗ್ಗೆ ತೀವ್ರ ಸ್ವರೂಪದ ಆಕ್ಷೇಪಣೆ ಇತ್ತು ಎಂದು ಮಹಾಲಕ್ಷ್ಮಿ ಹೇಳುತ್ತಾರೆ.

ಇದನ್ನೂ ಓದಿ:  ಸುಜಾತ ಭಟ್ ಹೇಳಿದ್ದೆಲ್ಲ ಸತ್ಯವೆಂದು ನಾವು ಕೂಡ ನಂಬಿ ಮೋಸಹೋದೆವು: ಜಯಂತ್, ಹೋರಾಟಗಾರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ ಮಾಡಿ